ಹೊರಗಡೆ ಸುತ್ತಾಡಲು ಪ್ರಿಯಕರ ಒಪ್ಪದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ
ಪ್ರಿಯಕರ ಹೊರಗಡೆ ಸುತ್ತಾಡಲು ಒಪ್ಪದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಜಯನಗರದ ಪಿಜಿಯಲ್ಲಿ ನಡೆದಿದೆ.
ಗಾಯತ್ರಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೂಲತಃ ತಮಿಳುನಾಡಿನ ತಂಜಾವೂರಿನವಳಾಗಿದ್ದ ಗಾಯತ್ರಿ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಎಸ್ಸಿ ಓದುತ್ತಿದ್ದಳು. ಗಾಯತ್ರಿ ತನ್ನ ಕ್ಲಾಸ್ಮೇಟ್ ಸುದರ್ಶನ್ ಎಂಬವನನ್ನು ಪ್ರೀತಿಸುತ್ತಿದ್ದಳು.
ಸುದರ್ಶನ್ ಹಾಗೂ ಗಾಯತ್ರಿ ಇಬ್ಬರು ಒಂದೇ ಊರಿನವರಾಗಿದ್ದು, ಪಿಯುಸಿಯಿಂದ ಕ್ಲಾಸ್ ಮೇಟ್ ಆಗಿದ್ದರು. ಗಾಯತ್ರಿ ಭಾನುವಾರ ಮುಂಜಾನೆಯಿಂದ ಸಂಜೆವರೆಗೆ ಸುದರ್ಶನ್ ಜೊತೆ ಸುತ್ತಾಡಿದ್ದಳು.
ಮತ್ತೆ ಭಾನುವಾರ ಸಂಜೆ ಗಾಯತ್ರಿ, ಸುದರ್ಶನ್ನನ್ನು ಸುತ್ತಾಡಲು ಕರೆದಿದ್ದಾಳೆ. ಆದರೆ ಹೊರಗಡೆ ಸುತ್ತಾಡಲು ಸುದರ್ಶನ್ ಒಪ್ಪಲಿಲ್ಲ.
ಈ ವೇಳೆ ಗಾಯತ್ರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸುದರ್ಶನ್ಗೆ ಮೆಸೇಜ್ ಮಾಡಿದ್ದಳು. ಗಾಯತ್ರಿ ಮೆಸೇಜ್ ನೋಡಿ ಕೋಪಗೊಂಡ ಸುದರ್ಶನ್ ಆಕೆಯ ನಂಬರ್ ಬ್ಲಾಕ್ ಮಾಡಿದ್ದಾನೆ.
ಸುದರ್ಶನ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ಗಾಯತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಈ ಬಗ್ಗೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.