ಹೊಟ್ಟೆಯ ಬೊಜ್ಜು ಕರಗಿಸುವ ಸೂಪರ್ ಟ್ರಿಕ್ಸ್! ಯಾವುದೇ ಕಸರತ್ತು ಬೇಡ!

ಹೊಟ್ಟೆಯ ಬೊಜ್ಜು ಕರಗಿಸುವ ಸೂಪರ್ ಟ್ರಿಕ್ಸ್! ಯಾವುದೇ ಕಸರತ್ತು ಬೇಡ!

ಸೂಪರ್ ಫಾಸ್ಟ್ ಯುಗದಲ್ಲಿ ದೇಹದ ಆರೋಗ್ಯದ ಕಡೆ ಗಮನಹರಿಸುವುದೇ ಕಡಿಮೆ. ಯಾಕೆಂದರೆ ಅಂತಹ ಪುರುಸೊತ್ತು ನಮಗೆ ಇರುವುದಿಲ್ಲ. ಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸುವ ಹೊತ್ತಿಗೆ ಕೆಲಸಕ್ಕೆ ಹೋಗಲು ಸಮಯವಾಗಿರುತ್ತದೆ. ಸಂಜೆ ಮನಗೆ ಬರುವಾಗಲೇ ರಾತ್ರಿ ಊಟದ ಸಮಯವಾಗಿರುತ್ತದೆ. ಇನ್ನು ದೇಹದ ಕಡೆ ಗಮನಹರಿಸಲು ಸಮಯವೆಲ್ಲಿದೆ? ಕೆಲವರು ದೇಹವನ್ನು ದಂಡಿಸದೆ ಇರುವ ಕಾರಣ ಹೊಟ್ಟೆ ಬೆಳೆಸಿಕೊಂಡಿದ್ದಾರೆ. ಅದರಲ್ಲೂ ಕೆಲವರು ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿದ್ದರೂ ಅವರ ಹೊಟ್ಟೆ ಮಾತ್ರ ದೊಡ್ಡದಾಗಿಯೇ ಇರುತ್ತದೆ. ಇದಕ್ಕೆ ಹಲವಾರು ಕಾರಣಗಳಿರಬಹುದು.

ಇನ್ನು ಕೆಲವರು ತೂಕದೊಂದಿಗೆ ಹೊಟ್ಟೆಯೂ ಮುಂದೆ ಬಂದಿರುತ್ತದೆ. ಹೊಟ್ಟೆಯಲ್ಲಿ ಬೊಜ್ಜು ಬೆಳೆಯಲು ಗರ್ಭಧಾರಣೆ ಬಳಿಕ ತೂಕ ಹೆಚ್ಚಾಗುವುದು, ಹಾರ್ಮೋನು ವೈಪರಿತ್ಯ, ಕುಳಿತುಕೊಂಡೇ ಕೆಲಸ ಮಾಡುವುದು, ಅಜೀರ್ಣ, ಅನಾರೋಗ್ಯಕರ ಆಹಾರಕ್ರಮ, ಅತಿಯಾಗಿ ಆಲ್ಕೋಹಾಲ್ ಸೇವನೆ ಇತ್ಯಾದಿ ಕಾರಣಗಳಾಗಿವೆ. ಬೊಜ್ಜು ಬೆಳೆಯಲು ಕಾರಣಗಳು ಏನೇ ಇದ್ದರೂ ಅದರಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಕೊಲೆಸ್ಟ್ರಾಲ್, ಅತಿಯಾದ ಒತ್ತಡ, ಬೆನ್ನುನೋವು, ಮಂಡಿನೋವು, ಹೃದಯಸಂಬಂಧಿ ಕಾಯಿಲೆ ಇತ್ಯಾದಿಗಳು ಕಾಣಿಸಿಕೊಳ್ಳುವುದು. ವ್ಯಾಯಾಮ ಮಾಡಲು ಸಮಯವಿಲ್ಲದೆ ಇರುವವರು ಇಲ್ಲಿ ಕೊಟ್ಟಿರುವ ಕೆಲವೊಂದು ಸಲಹೆಗಳನ್ನು ಪಾಲಿಸಿ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದಾಗಿದೆ…

ಜೇನುತುಪ್ಪ ಜೇನುತುಪ್ಪದಿಂದ ನಿಮ್ಮ ದಿನವನ್ನು ಪ್ರಾರಂಭಿಸಿ ಒಂದು ಚಹಾಚಮಚದಷ್ಟು ಜೇನನ್ನು ಬಿಸಿನೀರಿನಲ್ಲಿ ಮಿಶ್ರಣಮಾಡಿ ಇದಕ್ಕೆ ಒಂದು ಚಹಾ ಚಮಚದಷ್ಟು ನಿಂಬೆ ರಸವನ್ನು ಸೇರಿಸಿ. ಇದನ್ನು ಬೆಳಗ್ಗೆ ಇದ್ದಿದ ತಕ್ಷಣ ಬರಿಹೊಟ್ಟೆಯಲ್ಲಿ ಸೇವಿಸಿ. ಪರಿಣಾಮಕಾರಿಯಾಗಿ ಹೊಟ್ಟೆಯ ಬೊಜ್ಜು ತಗ್ಗಿಸಲು ಪ್ರತಿದಿನ ಎರಡು ಮೂರು ತಿಂಗಳವರೆಗೂ ಸೇವಿಸಿ.

ಹಸಿವಾದಾಗಲೆಲ್ಲಾ ಗ್ರೀನ್ ಟೀ ಅಥವಾ ತರಕಾರಿಯ ಸಲಾಡ್ ತಿನ್ನಿ ನೀವು ಊಟದ ಪ್ರಮಾಣದಲ್ಲಿ ಕಡಿಮೆ ಮಾಡುವುದರಿಂದ ಹಸಿವಾಗುವುದು ಸಹಜ. ಆ ಸಮಯದಲ್ಲಿ ತರಕಾರಿ ಸಲಾಡ್ ಅಥವಾ ಗ್ರೀನ್ ಟೀ ಕುಡಿಯಬೇಕು. ಇದು ಬೊಜ್ಜನ್ನು ಕರಗಿಸುವುದರೊಂದಿಗೆ ಚರ್ಮವನ್ನೂ ಸುಂದರವಾಗಿಸುತ್ತದೆ.

ದಿನಕ್ಕೆ ಎರಡು ಬಾರಿ ಊಟ ಮಾತ್ರವಿರಲಿ ಡಯಟ್ ಮಾಡುತ್ತಿದ್ದೀರ ಎಂದರೆ ಸಂಪೂರ್ಣ ಊಟ ಬಿಟ್ಟು ಕೂರಬೇಕೆಂದೇನಿಲ್ಲ. ದೇಹಕ್ಕೆ ಅವಶ್ಯಕವಾದ ಪೋಷಕಾಂಶವನ್ನು ನೀಡಲೇಬೇಕು. ದಿನದಲ್ಲಿ ಒಂದು ಗ್ಲಾಸ್ ಹಾಲು, ಧಾನ್ಯಗಳು, ಮೊಟ್ಟೆ ಮತ್ತು ಫೈಬರ್ ಇರುವ ತರಕಾರಿ ನಿಮ್ಮ ಆಹಾರದೊಂದಿಗಿರಲಿ.

ಬಿಯರ್ ಮಾತ್ರ ಕುಡಿಯಲೇಬೇಡಿ! ಯಾವುದೇ ಆಲ್ಕೋಹಾಲ್ ಉತ್ಪನ್ನವನ್ನು ಅತಿಯಾಗಿ ಸೇವನೆ ಮಾಡಿದಾಗ ಅದರಿಂದ ತೂಕ ಹೆಚ್ಚಾಗುವುದು. ಬಿಯರ್ ನಲ್ಲಿ ಅತಿಯಾದ ಕ್ಯಾಲರಿ ಇರುವುದರಿಂದ ಇದು ಹೊಟ್ಟೆಯ ಬೊಜ್ಜನ್ನು ಹೆಚ್ಚಿಸುವುದು.

ಪುದೀನಾ ಪುದೀನಾವು ತನ್ನ ಸುವಾಸನೆಯಿಂದಾಗಿ ಆಹಾರದಲ್ಲಿನ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಇದು ಹೊಟ್ಟೆಯ ಕೊಬ್ಬು ಕರಗಿಸುವುದು. ಇದು ದೇಹದಲ್ಲಿರುವ ಕಲ್ಮಶ ಮತ್ತು ವಿಷಕಾರಿ ಅಂಶಗಳನ್ನು ಕಿತ್ತುಹಾಕುವುದು. ಹೊಟ್ಟೆ ಉಬ್ಬರ ಕಡಿಮೆ ಮಾಡಿ ಜೀರ್ಣಕ್ರಿಯೆ ವೃದ್ಧಿಸುವುದು. ಆಹಾರದಲ್ಲಿ ಪುದೀನಾ ಬಳಸಬಹುದು ಅಥವಾ ಪುದೀನಾ ಚಹಾ ಕುಡಿಯಬಹುದು.

ಅಲೋವೆರಾ ಅಲೋವೆರಾದಲ್ಲಿ ಇರುವಂತಹ ಹಲವಾರು ರೀತಿಯ ಆರೋಗ್ಯ ಲಾಭಗಳಿಂದ ಇದು ತುಂಬಾ ಜನಪ್ರಿಯವಾಗಿದೆ. ಇದನ್ನು ಚರ್ಮ ಹಾಗೂ ಕೂದಲಿನ ಆರೈಕೆಯ ಜತೆಜತೆಗೆ ತೂಕ ಕಳೆದುಕೊಳ್ಳಲು ಬಳಸಲಾಗುವುದು. ಅಲೋವೆರಾದಲ್ಲಿರುವ ಆ್ಯಂಟಿಆಕ್ಸಿಡೆಂಟ್ ದೇಹವನ್ನು ನಿರ್ವಿಷಗೊಳಿಸುವುದು. ಇದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗಿ ಹೊಟ್ಟೆಯ ಕೊಬ್ಬು ಕರಗುವುದು. ಪ್ರತಿನಿತ್ಯ ಬೆಳಗ್ಗೆ ಅಲೋವೆರಾ ಜ್ಯೂಸ್ ಕುಡಿದರೆ ಅದರಿಂದ ಬೇಗನೆ ತೂಕ ಕಡಿಮೆಯಾಗುವುದು.

ಕೊತ್ತಂಬರಿ ಸೊಪ್ಪು ಅಲಂಕಾರಕ್ಕೆ ಹೆಚ್ಚಾಗಿ ಬಳಸುವಂತಹ ಕೊತ್ತಂಬರಿ ಸೊಪ್ಪು ಹೊಟ್ಟೆಯ ಕೊಬ್ಬು ಕರಗಿಸಲು ಒಳ್ಳೆಯ ಗಿಡಮೂಲಿಕೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತಗ್ಗಿಸುವ ಕೊತ್ತಂಬರಿಯು ಹಸಿವನ್ನು ನಿಯಂತ್ರಿಸಲು ನೆರವಾಗುವುದು. ಇದರಿಂದ ಆಹಾರವು ಕೊಬ್ಬಾಗಿ ಪರಿವರ್ತನೆಯಾಗುವ ಬದಲು ಶಕ್ತಿಯಾಗಿ ಕೆಲಸ ಮಾಡುವುದು. ಅಡುಗೆಯಲ್ಲಿ ಹೆಚ್ಚಾಗಿ ಕೊತ್ತಂಬರಿ ಸೊಪ್ಪನ್ನು ಬಳಸಿ

ತುಳಸಿ ಚಹಾ ತುಳಸಿಯು ತೂಕ ಕಳೆದುಕೊಳ್ಳುವವರಿಗೆ ತುಂಬಾ ಪರಿಣಾಮಕಾರಿ ಗಿಡಮೂಲಿಕೆ. ಇದು ಕೊರ್ಟಿಸಾಲ್ ಮಟ್ಟವನ್ನು ಕಡಿಮೆ ಮಾಡುವುದು. ಕೊರ್ಟಿಸಾಲ್ ಮಟ್ಟವು ಅತಿಯಾಗಿದ್ದರೆ ನಿಮ್ಮ ಸೊಂಟದ ಸುತ್ತಲು ಕೊಬ್ಬು ಶೇಖರಣೆಯಾಗುವುದು. ಆಯುರ್ವೇದದ ಪ್ರಕಾರ ತುಳಸಿ ಗಿಡದಲ್ಲಿ ಕೊಬ್ಬನ್ನು ಕರಗಿಸುವಂತಹ ಗುಣಗಳು ಇವೆ.

  ಸಿಂಪಲ್ ಟಿಪ್ಸ್ ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ. ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ. ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.

Leave a Reply

Your email address will not be published.