ಸ್ವಂತ ಕಾರು ಖರೀದಿಸಿದ ಕನ್ನಡದ ಮೊದಲ ನಟ ಇವರೇ ನೋಡಿ

1ಸ್ವಂತ ಕಾರು ಖರೀದಿಸಿದ ಕನ್ನಡದ ಮೊದಲ ನಟ ಇವರೇ ನೋಡಿ

ಚೊಕ್ಕಣ್ಣ ಅಯ್ಯಂಗಾರ್’ ಯೆಂದು ಮನೆಯಲ್ಲಿ ಕರೆಯಲ್ಪಡುತ್ತಿದ್ದ, ‘ಸಂಪತ್ ಐಯ್ಯಂಗಾರ್’ ಎಂಬ ಹೆಸರಿನ ಯುವಕನ ಹೆಸರನ್ನು ಕನ್ನಡ ಚಲನಚಿತ್ರರಂಗದಲ್ಲಿ ‘ಕಲ್ಯಾಣ್ ಕುಮಾರ್’ ಎಂದು ಬದಲಾಯಿಸಲಾಯಿತು.

ಐವತ್ತರ ದಶಕದಲ್ಲಿ ಅತ್ಯಂತ ಯಶಸ್ಸುಗಳಿಸಿದ ಹಾಗೂ ಕನ್ನಡ ಚಿತ್ರರಂಗವನ್ನಾಳಿದ ‘ಕುಮಾರ ತ್ರಯ’ರಲ್ಲಿ ಮೊದಲನೆಯವರೆಂದರೆ ಈ ಕಲ್ಯಾಣಕುಮಾರ್ ರವರೇ. ಇನ್ನಿಬ್ಬರು ರಾಜಕುಮಾರ್ ಮತ್ತು ಉದಯಕುಮಾರ್ ರವರುಗಳು. ಕಾಲಾನುಕ್ರಮದಲ್ಲಿ, ಮುಂದೆ ‘ಅಶ್ವಥ್’ ಮುಂತಾದ ಕಲಾವಿದರ ಆಗಮನವಾಯಿತು.

ಸುಮಾರು ೨೦೦ ಚಿತ್ರಗಳಲ್ಲಿ ನಟಿಸಿದ ಕಲ್ಯಾಣ್ ಕುಮಾರ್ ಭಾವಪೂರ್ಣ ಅಭಿನಯಕ್ಕೆ ಹೆಸರುವಾಸಿ. ವಾಸ್ತವದಲ್ಲಿ, ಇವರೇ ಕನ್ನಡದ ಮೊದಲ ಸೂಪರ್ ಸ್ಟಾರ್.

ಆ ಕಾಲದಲ್ಲಿ ಇವರು ರಾಜ್ ಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು. ಇವರೇ ನೋಡಿ ಕನ್ನಡಲ್ಲಿ ಸ್ವಂತ ಕಾರು ಖರೀದಿಸಿದ ಮೊದಲ ನಟ.

ಕಲ್ಯಾಣ್‌ ಕುಮಾರ್ ಎಂದೊಡನೆ ಮೊದಲು ನೆನಪಾಗುವದು ಕನ್ನಡದ ಮೊದಲ ವರ್ಣಚಿತ್ರ ಅಮರಶಿಲ್ಪಿ ಜಕಣಾಚಾರಿ. ಅದರಲ್ಲಿ ಜಕ್ಕಣಾಚಾರಿಯ ಪಾತ್ರಕ್ಕೆ ಜೀವ ತುಂಬಿದವರೇ ಈ ಕಲ್ಯಾಣ್‌ಕುಮಾರ್.

ಮನೆತನ’ ಎಂಬ ದೂರದರ್ಶನದ ಧಾರಾವಾಹಿಯ ಮುಖಾಂತರ ಮನರಂಜನೆಯ ಮತ್ತೊಂದು ಮಾಧ್ಯಮಕ್ಕೆ ಕಾಲಿಟ್ಟ ಕಲ್ಯಾಣ್‌ ಕುಮಾರ್ ಅತ್ಯಂತ ಜನಪ್ರಿಯರಾದರು. ಈ ಧಾರಾವಾಹಿಯ ಚಿತ್ರೀಕರಣ ಇನ್ನೂ ನಡೆಯುತ್ತಿದ್ದಾಗಲೇ, ಅವರು ತಮ್ಮ ೭೦ನೇ ವಯಸ್ಸಿನಲ್ಲಿ, ‘ಇಹಲೋಕ ಯಾತ್ರೆ’ ಮುಗಿಸಿದರು.

Leave a Reply

Your email address will not be published.