ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಅತಿ ಹೆಚ್ಚು TRP ಯಾವ ನಟನ ಸಂಚಿಕೆಗೆ ಬಂತು

ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಅತಿ ಹೆಚ್ಚು TRP ಯಾವ ನಟನ ಸಂಚಿಕೆಗೆ ಬಂತು

ಶನಿವಾರ ಮತ್ತು ಭಾನುವಾರ ಬಂದ ತಕ್ಷಣ ಎಲ್ಲರೂ ಕಾತುರದಿಂದ ಕಾದು ನೋಡೋ ಕಾರ್ಯಕ್ರಮವೆಂದರೆ ಅದು Weekend With Ramesh. ಜೀ ಕನ್ನಡದಲ್ಲಿ ಪ್ರಸಾರವಾಗುವ ಈ ಶೋ ಇಡೀ ಕರ್ನಾಟಕದ ಮನೆ ಮಾತಾಗಿದೆ. ಪ್ರತಿ ವಾರ ಸಾಧಕರು ಈ ಶೋ ಗೆ ಬಂದು ತಮ್ಮ ಕಷ್ಟ ಸುಖವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. ಇದನ್ನು ನೋಡಿ ಯುವ ಜನರಿಗೂ ಸಾಧನೆ ಮಾಡಲು ಸ್ಫೂರ್ತಿ ಕೊಡುತ್ತದೆ.

Weekend with Ramesh ಮೊದಲ ಸಂಚಿಕೆಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಬಂದಿದ್ದರು ಹಾಗೂ ಅವರ ಜೀವನದ ನೋವು ನಲಿವನ್ನು ಹೇಳಿಕೊಂಡರು.

ಹಾಗೆ ಮೊದಲ season ಅಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಬಂದು, ತಾವು ಚಿತ್ರರಂಗದಲ್ಲಿ ನಾಯಕನಾಗಿ ಹೊರಹೊಮ್ಮಲು ಎಷ್ಟಲ್ಲ ಕಷ್ಟ ಪಟ್ಟರು ಎಂದು ಹೇಳಿಕೊಂಡರು.

Season 2ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಂಚಿಕೆ ಅಂತೂ ಎಲ್ಲರ ಕಣ್ಣಿನಲ್ಲಿ ನೀರು ತಂದಿತ್ತು. ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದು ಈಗ ನಮ್ಮ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಿದ್ದಾರೆ ಅಂದರೆ ಅದಕ್ಕೆ ಅವರು ಪಟ್ಟ ಶ್ರಮವೇ ಸಾಕ್ಷಿ.

Season 2ನ ಕೊನೆಯ ಸಂಚಿಕೆಗೆ ಬಂದವರು ಎಂದರೆ ಅದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್..!! ಚಿತ್ರರಂಗಕ್ಕೆ ಮೊದಲು ಬಂದಾಗ ಯಾರು ಸಹ ಅವರಿಗೆ ಮರ್ಯಾದೆ ಕೊಡಲಿಲ್ಲ, ಪ್ರೋತ್ಸಾಹ ಮಾಡಲಿಲ್ಲ, ಆದರು ಸಹ ತಮ್ಮ ಸ್ವಂತ ಪ್ರತಿಭೆ ಇಂದ ಇವತ್ತು ಇಡೀ ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ ಸುದೀಪ್.

ಈ ಸಾಧಕರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ಕರ್ನಾಟಕದ ಮೂಲೆ ಮೂಲೆಯಲ್ಲಿ ಇದ್ದ ಜನ ಕೂಡ ನೋಡಿ ಖುಷಿ ಪಟ್ಟಿದ್ದಾರೆ. ಈಗ weekend with ರಮೇಶ್ ಕಾರ್ಯಕ್ರಮದಲ್ಲಿ ಅತಿ ಹೆಚ್ಚು TRP ಬಂದಿದ್ದು ಯಾರ ಸಂಚಿಕೆಯಲ್ಲಿ ಗೊತ್ತಾ??

ಹೌದು ದರ್ಶನ್ ಅವರ ಸಂಚಿಕೆಗೆ ಅತಿ ಹೆಚ್ಚು TRP ಬಂದಿದೆ ಹಾಗೂ ಇದನ್ನು ಸ್ವತಃ ಜೀ ಕನ್ನಡ ಮುಖ್ಯಸ್ಥ ಆದ ರಾಘವೇಂದ್ರ ಹುಣಸೂರು ಖಚಿತ ಪಡಿಸಿದ್ದಾರೆ. ಆದರೆ TRP ಅಂಕಿ ಅಂಶವನ್ನು ಅವರು ಬಿಟ್ಟು ಕೊಟ್ಟಿಲ್ಲ.

Leave a Reply

Your email address will not be published. Required fields are marked *