ರಾಧಾ ಮತ್ತು ಕೃಷ್ಣ ಮದುವೆ ಆಗದಿರುವ ಹಿಂದಿನ ನಿಜವಾದ ಕಾರಣ ಇಲ್ಲಿದೆ ಓದಿ

1ರಾಧಾ ಮತ್ತು ಕೃಷ್ಣ ಮದುವೆ ಆಗದಿರುವ ಹಿಂದಿನ ನಿಜವಾದ ಕಾರಣ ಇಲ್ಲಿದೆ ಓದಿ

ಕೃಷ್ಣನ ಲೀಲೆಯ ಬಗ್ಗೆ ನಮಗೆಲ್ಲರಿಗೂ ಗೊತ್ತು. ದ್ವಾಪರ ಯುಗದಲ್ಲಿ ಧರ್ಮದ ನೆಲೆಗಾಗಿ ವಿಷ್ಣುವಿನ ಮತ್ತೊಂದು ಅವತಾರ ಶ್ರೀಕೃಷ್ಣ ಹುಟ್ಟುವನು. ದೇವಕಿ ವಾಸುದೇವ ಅವರ 8 ನೇ ಮಗು ಶ್ರೀ ಕೃಷ್ಣ ಮಥುರಾ ದಲ್ಲಿ ಜನಿಸಿ ಅಲ್ಲಿಂದ ಬೃಂದಾವನದ ಯಶೋದೆ ನಂದನರ ಬಳಿ ಬೆಳೆಯುತ್ತಾನೆ.

ಬಾಲ್ಯದ ಕೃಷ್ಣ ಬಹಳ ತುಂಟ. ಅವನು ಬೆಣ್ಣೆ ಕದಿಯುತ್ತಿದ್ದ ಕಥೆಗಳು ಇಂದಿಗೂ ಜನ ಮಾತನಾಡುತ್ತಾರೆ. ಒಂದು ಸಾರಿ ಕೊಳಲು ಊದುವುದಕ್ಕೆ ಶುರು ಮಾಡಿದರೆ ಬೃಂದಾವನದ ಗೋಪಿಕೆಯರೆಲ್ಲ ಅವನ ಬಳಿ ಮುತ್ತಿಟ್ಟುಕೊಳ್ಳುತ್ತಿದ್ದರು.

ರಾಧಾಕೃಷ್ಣರ ಪ್ರೇಮ, ರಾಸಲೀಲೆ ನಮಗೆಲ್ಲರಿಗೂ ಗೊತ್ತು. ಆದರೆ ಕಂಸನ ವಧೆಯ ನಂತರ ರಾಧಾ ಏನಾದಳು? ಕೃಷ್ಣ ಏಕೆ ರಾಧಾಳನ್ನು ಮದುವೆಯಾಗಲಿಲ್ಲ? ಯಾಕೆ ರಾಧಾಳ ಪ್ರಸ್ತುತ ಮತ್ತೆ ಬಂದಿಲ್ಲ? ಇದನೆಲ್ಲ ತಿಳಿಯೋಣ ಬನ್ನಿ..ಅವರಿಬ್ಬರೂ ಏಕೆ ಮದುವೆಯಾಗಿಲ್ಲ ಎಂಬುದು ಹಲವು ಗ್ರಂಥಗಳಲ್ಲಿ ಬೇರೆ ಬೇರೆ ರೀತಿಯ ಕಥೆಗಳು ಕಾಣಬಹುದು ಅದರಲ್ಲಿ ಕೆಲವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತೇವೆ

ಒಂದು ಕಥೆಯಲ್ಲಿ ಕೃಷ್ಣ ಹಾಗೂ ರಾಧೆ ರ ಅಂತಸ್ತು ಹೊಂದುತಿರಲಿಲ್ಲ ಕೃಷ್ಣನ ತಾಯಿ ಯಶೋದೆ ಅವರಿಬ್ಬರ ಪ್ರೇಮವನ್ನು ನಿರಾಕರಿಸುತ್ತಾರೆ. ಏಕೆಂದರೆ ರಾಧಾ ಕೃಷ್ಣನಿಗಿಂತ ವಯಸ್ಸಿನಲ್ಲಿ ದೊಡ್ಡವಳು ಹಾಗೂ ಅಂತಸ್ತಲ್ಲಿ ಬಹಳ ವ್ಯತ್ಯಾಸವಿತ್ತು.

ಆದರೆ ಕೃಷ್ಣ ಕೇಳಲಿಲ್ಲ. ಅವನು ರಾಧಾಳನ್ನೇ ಮದುವೆಯಾಗುತ್ತೇನೆ ಎಂದು ಹಟ ಹಿಡಿದನು. ಅದಕ್ಕಾಗಿ ಯಶೋದೆ ನಂದನನ ಬಳಿ ಇದನ್ನು ಪ್ರಸ್ತುತ ಮಾಡಿದಳು. ಅವರು ಅವರ ಕುಲಗುರು ರವರ ಬಳಿ ಹೋದರು. ಆಗ ಕುಲಗುರು ರವರು ಕೃಷ್ಣನಿಗೆ ಅವನ ಧರ್ಮದ ಸಂಸ್ಥಾನ ಮಾಡಬೇಕಾದ ಕರ್ತವ್ಯದ ಬಗ್ಗೆ ಜಾಗೃತಗೊಳಿಸುವ ಪ್ರಯತ್ನ ಮಾಡಿ, ಅವನ ನಿಜವಾದ ತಂದೆ ತಾಯಿಯ ಬಗ್ಗೆ ಹೇಳಿ ಅವನ ಮನವನ್ನು ಒಪ್ಪಿಸಿದರು.

ಕಂಸನ ವಧೆ ಮಾಡಲು ಬೃಂದಾವನದಿಂದ ಮಧುರೆಗೆ ತೆರಳುವಾಗ ರಾಧಾಳನ್ನು ಕೊನೆಯ ಬಾರಿ ನೋಡಿ ಅವಳಿಗೆ ನಾನು ನೀನು ಮದುವೆ ಆಗದಿದ್ದರೆ ಏನು, ನಮ್ಮಿಬ್ಬರ ಆತ್ಮ ಒಂದೇ ದೇಹ ಎರಡು ಅಷ್ಟೇ ಎಂದು ಹೇಳುತ್ತಾ ತನ್ನ ಕೊಳಲನ್ನು ರಾಧೆಗೆ ನೀಡಿ ಅಲ್ಲಿಂದ ಹೊರಟನು. ಇದರ ನಂತರ ಕೃಷ್ಣನು ಅವನ ಕೊಳಲನ್ನು ನುಡಿಸುವುದು ಎಲ್ಲಿಯೂ ಕಂಡುಬರುವುದಿಲ್ಲ.

ಮತ್ತೊಂದು ಕಥೆಯಲ್ಲಿ ರುಕ್ಮಿಣಿ ದೇವಿ ಲಕ್ಷ್ಮಿಯ ಅವತಾರವಾಗಿ ಭೀಷ್ಮಕ ರ ಮಗಳಾಗಿ ಹುಟ್ಟುತ್ತಾಳೆ. ಮಗುವಾಗಿ ಇದ್ದಾಗ ಇವಳನ್ನು ಒಂದು ರಾಕ್ಷಸಿ ಎತ್ತುಕೊಂಡು ಹೊರಡುತ್ತಾಳೆ. ರುಕ್ಮಿಣಿ, ಲಕ್ಷ್ಮೀ ಅವತಾರವಾಗಿದ್ದ ಕಾರಣ ಅವಳ ಗಾತ್ರವನ್ನು ಹೆಚ್ಚಿಸಲು ಶುರು ಮಾಡುತ್ತಾಳೆ.

ಆ ಗಾತ್ರವನ್ನು ಎತ್ತು ಕೊಂಡು ಹೋಗುವುದಕ್ಕೆ ರಾಕ್ಷಸಿಗೆ ಸಾಧ್ಯವಾಗಲಿಲ್ಲ. ಅದಕ್ಕೆ ರುಕ್ಮಿಣಿಯನ್ನು ಕೆಳಗೆ ಬಿಸಾಡುವಳು. ರುಕ್ಮಿಣಿಯು ಬರ್ಸಾನದ ನದಿಯ ಒಂದು ಕಮಲದ ಮೇಲೆ ಬೀಳುವಳು. ಆಗ ವೃಷಭಾನು ಹಾಗೂ ಕೃತಿ ದೇವಿಗೆ ಈ ಮಗು ಎಂದರೆ ರುಕ್ಮಿಣಿ ಸಿಗುವಳು.

ಇವಳನ್ನು ರಾಧಾ ಹೆಸರಲ್ಲಿ ನಾಮಕರಣ ಮಾಡಿದರು. ಇದೆಲ್ಲದರ ನಂತರ ರುಕ್ಮಿಣಿಯ ತಂದೆಗೆ ಅವನ ಮಗಳು ಬರ್ಸಾನಾದಲ್ಲಿ ಇದ್ದಾಳೆ ಎಂದು ಗೊತ್ತಾಗಿ ಅವಳನ್ನು ಕರೆದೊಯ್ದರು ಹಾಗು ಕೃಷ್ಣ ರುಕ್ಮಿಣಿ(ರಾಧಾ) ಳನ್ನು ಮದುವೆ ಆದನು.

ಮತ್ತೊಂದು ಕಥೆಯಲ್ಲಿ ರಾಧಾ ಕೃಷ್ಣನ ಒಂದು ಭಾಗ ಅಷ್ಟೇ. ನಿಮಗೆ ಗೊತ್ತಿರುವ ಕಾರಣ ವನ್ನು ಕಾಮೆಂಟ್ ಮಾಡಿ.

Leave a Reply

Your email address will not be published.