ರಸ್ತೆ ಪಕ್ಕ ಕಬ್ಬಿನ ಹಾಲು ಕುಡಿಯುವವರು ಇದನ್ನು ಮೊದಲು ಓದಲೇ ಬೇಕು

ರಸ್ತೆ ಪಕ್ಕ ಕಬ್ಬಿನ ಹಾಲು ಕುಡಿಯುವವರು ಇದನ್ನು ಮೊದಲು ಓದಲೇ ಬೇಕು

ದಾಹ ಇಂಗಿಸಲು ಶುಚಿ – ರುಚಿಯಾದ ಕಬ್ಬಿನ ಹಾಲಿನ ಪಾನಕ ‘ಅಮೃತ’ವೆಂದೇ ಹೇಳಬಹುದು. ಇದರ ಸೇವನೆಯಿಂದ ದೇಹಕ್ಕೆ ಬೇಕಾದ ಪ್ರೋಟಿನ್, ವಿಟಮಿನ್, ಕ್ಯಾಲ್ಸಿಯಂ, ಕಬ್ಬಿಣಾಂಶ, ಫಾಸ್ಪರಸ್ ನೈಸರ್ಗಿಕವಾಗಿ ಪಡೆಯಬಹುದು. ಉರಿಮೂತ್ರ, ಮೂತ್ರಕಟ್ಟು, ಸಾಧಾರಣ ಜ್ವರ, ಕೆಮ್ಮು, ಅಜೀರ್ಣ, ಮಲಬದ್ಧತೆ, ಸಂಧಿವಾತ, ಜ್ಞಾಪಕಶಕ್ತಿ ಇಲ್ಲದಿರುವಿಕೆ, ರಕ್ತಹೀನತೆ, ಜಠರದ ಹುಣ್ಣು ಇತ್ಯಾದಿ ಸಮಸ್ಯೆಗಳಿಗೆ ಎಳನೀರು, ಲಿಂಬು, ಶುಂಠಿರಸ ಸೇರಿಸಿದ ಈ ಹಾಲಿನ ಸೇವನೆಯಿಂದ ಉತ್ತಮ ಫಲ ದೊರಕುತ್ತದೆ. ದೇಹಕ್ಕೆ ಅತಿ ಉಷ್ಣವಾದಾಗ ತಾಜಾತನದ ಈ ಹಾಲಿನ ಸೇವನೆಯಿಂದ ದೇಹವು ಕೂಡಲೇ ಸಮಸ್ಥಿತಿಗೆ ಬಂದು ಉರಿಶಮನವಾಗಿ ಚೈತನ್ಯ ವೃದ್ಧಿಸುವುದು.

ಇದು ಪಿತ್ತನಾಶಕ ಮತ್ತು ಹೃದಯಕ್ಕೆ ಹಿತಕಾರಿ. ಕಡಿಮೆ ಕ್ಯಾಲರಿಯನ್ನು ಹೊಂದಿರುವ ಇದರ ಸೇವನೆ ಶರೀರದ ತೂಕದ ನಿಯಂತ್ರಣಕ್ಕೆ ಸಹಕಾರಿ ಮತ್ತು ರಕ್ತದಲ್ಲಿರುವ ಗ್ಲೂಕೋಸ್ ಮಟ್ಟ ಸರಿ ಮಾಡಿ ದೇಹವನ್ನು ಆರೋಗ್ಯವಾಗಿಡುತ್ತದೆ. ಕಬ್ಬಿನ ಹಾಲಿಗೆ ಎಳನೀರು ಬೆರೆಸಿ ಸೇವಿಸುವುದರಿಂದ ಅಸಿಡಿಟಿ ಹಾಗೂ ಅರಿಶಿಣ ಕಾಮಾಲೆ ರೋಗ ಕಡಿಮೆಯಾಗುತ್ತದೆ.

ಆಯಾಸ ಪರಿಹಾರ ಮಾಡುವ ಈ ಹಾಲಿನ ಸೇವನೆಯಿಂದ ದೇಹದ ಒಳಗಿನ ಅಂಗಾಂಗಳಾದ ಉದರ, ಕಿಡ್ನಿ, ಹೃದಯ, ಮೆದುಳು ಹಾಗೂ ಕಣ್ಣಿನ ಕಾರ್ಯಕ್ಷಮತೆಯು ಹೆಚ್ಚುತ್ತದೆ. ರಕ್ತ ಶುದ್ಧೀಕರಣಕ್ಕೆ ಹಿತಕಾರಿಯಾದ ಇದರ ಸೇವನೆಯಿಂದ ದೇಹಕಾಂತಿ ಹೆಚ್ಚುತ್ತದೆ ಮತ್ತು ಶುಂಠಿ ಲಿಂಬು ಬೆರೆಸಿದ ಈ ಹಾಲಿನ ಸೇವನೆ ಜೀರ್ಣಶಕ್ತಿಯನ್ನು ವೃದ್ಧಿಸಿ ಹೊಟ್ಟೆ ಉಬ್ಬರ ಇತ್ಯಾದಿಗಳನ್ನು ಹೋಗಲಾಡಿಸುತ್ತದೆ.

ಇದರಲ್ಲಿರುವ ಆಲ್ಕಲೈನ್ ಎಂಬ ಅಂಶವು ಬ್ರೆಸ್ಟ್ ಮತ್ತು ಪ್ರೊಸ್ಟೇಟ್ ಕ್ಯಾನ್ಸರ್ ಕೋಶಗಳ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *