ಯಾವ ರಾಶಿಯವರು ಜೀವನ ಪೂರ್ತಿ ಶ್ರೀಮಂತರಾಗಿ ಇರುತ್ತಾರೆ ಗೊತ್ತಾ

ಯಾವ ರಾಶಿಯವರು ಜೀವನ ಪೂರ್ತಿ ಶ್ರೀಮಂತರಾಗಿ ಇರುತ್ತಾರೆ ಗೊತ್ತಾ

 

ಎಷ್ಟೋ ಜನ ರಾಶಿ ಮತ್ತು ಶಸ್ತ್ರವನ್ನು ನಂಬುವುದಿಲ್ಲ ಆದರೆ ಇದನ್ನು ಸರಿಯಾಗಿ ತಿಳಿದವರ ಜೀವನ ಸುಖವಾಗಿ ಇರುವುದು. ಸಾಮಾನ್ಯವಾಗಿ ಎಲ್ಲರೂ ಶ್ರೀಮಂತರಾಗಿರಬೇಕು ಎಂದು ಬಯಸುತ್ತಾರೆ. ಕೈ ತುಂಬಾ ಹಣ, ಅನೇಕ ಸವಲತ್ತು ಸೌಲಭ್ಯವನ್ನು ಹೊಂದಬೇಕು ಎಂದು ಭಾವಿಸುತ್ತಾರೆ. ಅನೇಕರಲ್ಲಿ ಕೆಲವರಿಗೆ ಗ್ರಹಗತಿಗಳ ಉತ್ತಮ ಸಂಚಾರದಿಂದ ಶ್ರೀಮಂತಿಕೆ ಒದಗಿ ಬರುವುದು. ಇನ್ನೂ ಕೆಲವರು ಅನಾನುಕೂಲದಿಂದ ಆರ್ಥಿಕ ಕುಸಿತ ಹಾಗೂ ನಷ್ಟವನ್ನು ಹೊಂದಬೇಕಾದಂತಹ ಪರಿಸ್ಥಿತಿ ಒದಗಿ ಬರುತ್ತದೆ.

 

ಕೆಲವರಿಗೆ ಅದೃಷ್ಟ ಎನ್ನುವುದು ಆಕಾಶ ದೀಪದಂತೆ ಆಗುವುದು. ಹುಟ್ಟಿದಾಗಿಂದಲೂ ಕಷ್ಟವನ್ನು ಅನುಭವಿಸುತ್ತಾ, ಕೊನೆಯವರೆಗೂ ಅದೇ ಜೀವನವನ್ನು ಅನುಭವಿಸುತ್ತಾರೆ. ಇನ್ನು ಕೆಲವರು ಬಹು ಬೇಗ ತಮ್ಮ ಜೀವನದಲ್ಲಿ ಶ್ರೀಮಂತಿಕೆಯನ್ನು, ಒಂದರ ಹಿಂದೊಂದು ಖುಷಿಯ ಕ್ಷಣಗಳನ್ನು ಪಡೆದುಕೊಳ್ಳುತ್ತಾರೆ. ಇವೆಲ್ಲದಕ್ಕೂ ಅವರ ರಾಶಿ ಫಲವೇ ಕಾರಣವಾಗಿರುತ್ತದೆ ಎನ್ನುವುದನ್ನು ನಾವು ಮರೆಯುವಂತಿಲ್ಲ.

 

ನಿಜ, ಕೆಲವು ರಾಶಿಗಳು ಬಹಳ ಅದೃಷ್ಟವಂತ ರಾಶಿಗಳು. ಅವುಗಳಲ್ಲಿ ಜನಿಸಿದವರು ಸಾಮಾನ್ಯವಾಗಿ ಹೆಚ್ಚು ಖುಷಿ ಹಾಗೂ ಶ್ರೀಮಂತಿಕೆಯನ್ನು ಅನುಭವಿಸುತ್ತಾರೆ. ಕೆಲವು ಮೂಲಗಳು ಹೇಳುವ ಪ್ರಕಾರ ಹನ್ನೆರಡು ರಾಶಿಗಳಲ್ಲಿ ಐದು ರಾಶಿ ಬಳ ಅದೃಷ್ಟವನ್ನು ತಂದು ಕೊಡುತ್ತದೆ. ಆ ರಾಶಿಯಲ್ಲಿ ಜನಿಸಿದವರು ತಮ್ಮ ಸಣ್ಣ ವಯಸ್ಸಿನಲ್ಲಿಯೇ ಅತ್ಯಂತ ಹಿರಿಮೆಯ ಸಾಧನೆ ಹಾಗೂ ಶ್ರೀಮಂತಿಕೆಯನ್ನು ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಗಳು ಯಾವವು? ಅದರಲ್ಲಿ ಹುಟ್ಟಿದವರ ಶ್ರೀಮಂತಿಕೆಯ ಫಲವೇನು? ಎನ್ನುವುದನ್ನು ನಾವಿಲ್ಲಿ ವಿವರಿಸಿದ್ದೇವೆ…

 

ಕನ್ಯಾ ರಾಶಿ

ಈ ರಾಶಿಯಲ್ಲಿ ಜನಿಸಿದವರು ಬಹಳ ನಿರ್ಧಾರಯುತ ಪ್ರವೃತ್ತಿಯನ್ನು ಹೊಂದಿರುತ್ತಾರೆ. ತಾವು ಮಾಡುವ ಕೆಲಸದ ಸಂಪೂರ್ಣ ವಿವರ ಪಡೆಯುವುದು, ಅದರ ಏಳಿಗೆಗಾಗಿ ಎಲ್ಲಾ ಶ್ರಮವನ್ನು ವ್ಯಯಿಸುತ್ತಾರೆ. ಇವರು ತಮ್ಮ ಜೀವನದಲ್ಲಿ ಬಹು ಬೇಗ ಶ್ರೀಮಂತಿಕೆ ಹಾಗೂ ಹೆಚ್ಚಿನ ಹಣವನ್ನು ಗಳಿಸುತ್ತಾರೆ. ಇವರು ತಮ್ಮ ಗುರಿಯನ್ನು ಸಾಧಿಸಲು ಬೇಕಾದ ಎಲ್ಲಾ ಕೆಲಸಗಳನ್ನು ನೆರವೇರಿಸುತ್ತಾರೆ. ಮತ್ತು ಎಲ್ಲಾ ಪೂರ್ವ ತಯಾರಿಯನ್ನು ಅಚ್ಚುಕಟ್ಟಾಗಿ ಮಾಡಿಕೊಂಡಿರುತ್ತಾರೆ.

 

ವೃಷಭ

ಇವರು ಅತ್ಯಂತ ಶ್ರಮಜೀವಿಗಳು. ಶ್ರಮ ಪಟ್ಟು ದುಡಿದು ಹೇಗೆ ಹಣ ಗಳಿಸಬೇಕು? ಎನ್ನುವುದನ್ನು ಅರಿತಿರುತ್ತಾರೆ. ಅಲ್ಲದೆ ಜೀವನದಲ್ಲಿ ವಿನೋದದಿಂದ ಹೇಗೆ ಬದುಕಬೇಕು ಎನ್ನುವುದನ್ನು ಅರಿತಿರುತ್ತಾರೆ. ಇವರ ಸ್ವಭಾವ ಸ್ವಲ್ಪ ಮುಂಡಾಗಿದ್ದರೂ ಸಹ ಯಾವ ಕೆಲಸವನ್ನು ಮಾಡಬೇಕು ಎನ್ನುವ ವಿಚಾರದ ಕುರಿತು ಸೂಕ್ತ ನಿರ್ಭಯವನ್ನು ತೆಗೆದುಕೊಳ್ಳುತ್ತಾರೆ. ತಮ್ಮ ಮನಸ್ಸಿಗೆ ತೋಚಿದ್ದನ್ನು ಸಾಧಿಸಿ ತೋರಿಸುತ್ತಾರೆ. ಇವರ ಗುಣವು ಅತ್ಯಂತ ವಿನಮ್ರತೆಯಿಂದ ಕೂಡಿರುತ್ತದೆ. ಈ ವ್ಯಕ್ತಿಗಳು ನಿಷ್ಠಾವಂತರು, ಬುದ್ಧಿವಂತರು ಮತ್ತು ಅವಲಂಬಿತರು ಆಗಿರುತ್ತಾರೆ. ಹಾಗಂತ ಇವರು ತಮ್ಮ ಸ್ವಭಾವದಲ್ಲಿ ಅವಲಂಬನೆಯನ್ನು ತೋರುವುದಿಲ್ಲ.

 

ಕಟಕ

ಪ್ರತಿಯೊಂದು ವಿಚಾರದ ಕುರಿತು ತಾರ್ಕಿಕ ಮತ್ತು ಪ್ರಾಯೋಗಿಕವಾಗಿ ಯೋಚಿಸುತ್ತಾರೆ. ಇವರು ತಮ್ಮ ಜೀವನದಲ್ಲಿ ಉತ್ತಮ ವಸ್ತುಗಳನ್ನು ಮಾತ್ರ ಬಯಸುತ್ತಾರೆ. ತಮ್ಮ ಹಣವನ್ನು ಬಹಳ ಎಚ್ಚರಿಕೆಯಿಂದ ವ್ಯಯ ಮಾಡುತ್ತಾರೆ. ಇತರ ರಾಶಿಚಕ್ರಗಳಿಗೆ ಹೋಲಿಸಿದರೆ ಹೆಚ್ಚು ಹಣವನ್ನು ಉಳಿಸಬಲ್ಲರು. ಜೀವನಲ್ಲಿ ಹೆಚ್ಚು ಸ್ಥಿರತೆ ಮತ್ತು ಸುರಕ್ಷತೆಗೆ ಹೆಚ್ಚು ಬೆಲೆ ಕೊಡುತ್ತಾರೆ. ತಮ್ಮ 30 ವರ್ಷದೊಳಗೆ ಹೆಚ್ಚು ಹಣವನ್ನು ಸಂಪಾದಿಸಿ ಐಷಾರಾಮಿ ಜೀವನವನ್ನು ಹೊಂದುವ ಇವರು ತಮ್ಮ ಕನಸುಗಳನ್ನು ಸಾಧಿಸಲು ಬಹಳ ತಾಳ್ಮೆಯಿಂದ ಮತ್ತು ನಿರಂತರವಾಗಿ ಕೆಲಸ ಕೈಗೊಳ್ಳುತ್ತಾರೆ.

 

ವೃಶ್ಚಿಕ

ಈ ರಾಶಿಯವರು ಅರ್ಥಗರ್ಭಿತ ಮತ್ತು ಅತೀಂದ್ರಿಯ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರಲ್ಲಿರುವ ಉತ್ತಮ ಆತ್ಮವಿಶ್ವಾಸದಿಂದಲೇ ಎಲ್ಲವನ್ನೂ ಸಾಧಿಸಿ ತೋರುತ್ತಾರೆ. ಶೈಕ್ಷಣಿಕವಾಗಿ ಉತ್ತಮ ಯಶಸ್ಸು ಹೊಂದುವ ಇವರು ಚಿಕ್ಕ ವಯಸ್ಸಿನಲ್ಲೇ ಅಧಿಕ ಹಣ ಹಾಗೂ ಉತ್ತಮ ಕೆಲಸವನ್ನು ಪಡೆದುಕೊಳ್ಳುತ್ತಾರೆ. ಸುಲಭವಾಗಿ ತಮ್ಮನ್ನು ತಾವು ಹೇಗೆ ಕಾಪಾಡಿಕೊಳ್ಳಬಹುದು ಎನ್ನುವುದನ್ನು ಅರಿತಿರುತ್ತಾರೆ.

 

ಕುಂಭ

ತಮ್ಮ ತಪ್ಪುಗಳಿಂದ ಉಂಟಾದ ಪರಿಣಾಮಗಳ ಬಗ್ಗೆ ಸೂಕ್ತ ರೀತಿಯಲ್ಲಿ ಪಾಠ ಕಲಿತು. ಅದರ ವಿಶ್ಲೇಷಣೆ ಮಾಡಿಕೊಳ್ಳುತ್ತಾರೆ. ಸ್ಪರ್ಧಾತ್ಮ ಸ್ವಭಾವದವರಾದ ಇವರು ತಮ್ಮ 30 ವರ್ಷದೊಳಗೆ ಅತ್ಯಂತ ಗೌರವ ಹಾಗೂ ಸಂಪತ್ತನ್ನು ಪಡೆದುಕೊಳ್ಳುತ್ತಾರೆ. ಇವರು ಸಂತೋಷದ ಪ್ರಜ್ಞೆಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಚೆನ್ನಾಗಿ ಅರಿತವರಾಗಿರುತ್ತಾರೆ.

 

ಸಿಂಹ

ಈ ರಾಶಿಯಲ್ಲಿ ಜನಿಸಿದವರು ಅತ್ಯಂತ ಶಕ್ತಿಯುತರು, ಉತ್ಸಾಹಿಗಳು, ಆಶಾವಾದಿಗಳು ಹಾಗೂ ಮನವನ್ನು ರಂಜಿಸುವ ಗುಣವನ್ನು ಹೊಂದಿರುತ್ತಾರೆ. ಇವರು ತಮ್ಮೊಂದಿಗೆ ಇತರರನ್ನು ಮುಂನ್ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಸೃಜನಶೀಲ ಪ್ರವೃತ್ತಿಯವರಾದ ಇವರು ತಮ್ಮ 30 ವರ್ಷದೊಳಗೆ ಹೆಚ್ಚಿನ ಸಾಧನೆ ಹಾಗೂ ಐಶ್ವರ್ಯವನ್ನು ಪಡೆದುಕೊಳ್ಳುತ್ತಾರೆ.

 

ಮಕರ

ಈ ರಾಶಿಯಲ್ಲಿ ಜನಿಸಿದವರು ಅತ್ಯಂತ ಶ್ರೀಮಂತಿಕೆಯನ್ನು ಪಡೆದುಕೊಳ್ಳುವರು. ಇವರು ಹೆಚ್ಚು ವಾಸ್ತವಿಕ ವಿಚಾರಗಳಿಗೆ ಮಹತ್ವ ನೀಡುವರು. ಯಾವುದೇ ದೊಡ್ಡ ದೊಡ್ಡ ನಿರ್ಣಯವನ್ನು ತೆಗೆದುಕೊಳ್ಳುವ ಮೊದಲು ಸೂಕ್ತ ವಿವರಣೆ ಹಾಗೂ ಪರಿಶೀಲನೆಯನ್ನು ನಡೆಸುವರು. ಇವರು ತೆಗೆದುಕೊಳ್ಳುವ ನಿರ್ಣಯವನ್ನು ಮನಸ್ಸಿನಿಂದ ತೆಗೆದುಕೊಳ್ಳುವುದರಿಂದ ಜನರಿಗೆ ಇವರು ಅತ್ಯಂತ ಭಾವನಾತ್ಮ ಜೀವಿಗಳೆಂದು ಕಾಣಿಸುವರು. ಇವರು ಕೆಲವು ವಿಷಯಗಳಲ್ಲಿ ಹೆಚ್ಚು ಆರಾಮದಾಯಕ ಅನುಭವವನ್ನು ಪಡೆದುಕೊಳ್ಳುತ್ತಾರೆ. ಹಣ ಹೂಡಿಕೆ ಮಾಡುವಾಗ ಅತ್ಯಂತ ಜಾಗರೂಕತೆಯಿಂದ ಹಾಗೂ ಬುದ್ಧಿವಂತಿಕೆಯಿಂದ ವರ್ತಿಸುತ್ತಾರೆ. ಇವರು ಸದಾ ಆರ್ಥಿಕ ಭದ್ರತೆ ಹಾಗೂ ಸ್ಥಿರತೆಯನ್ನು ಬಯಸುತ್ತಾರೆ. ಶಿಸ್ತು ಬದ್ಧರಾಗಿ ಇರುವ ಇವರು ಹಣವನ್ನು ಗೌರವಿಸುತ್ತಾರೆ. ಜೊತೆಗೆ ಅದರ ಆಯ ವ್ಯಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಾರೆ.

Leave a Reply

Your email address will not be published. Required fields are marked *