ನಿಮ್ಮ ಬಳಿ ಈ ನೋಟು ಇದ್ದರೆ ಈ ಸುದ್ದಿಯನ್ನು ಖಂಡಿತಾ ಓದಲೇ ಬೇಕು

ಗರಿ ಗರಿಯಾದ 5 ರೂಪಾಯಿ ನೋಟು ಕೊಟ್ಟರೂ ನಗರದ ಯಾವುದೇ ಅಂಗಡಿ, ಬೀದಿ ಬದಿ ವ್ಯಾಪಾರಿಗಳು ತೆಗೆದುಕೊಳ್ಳುವುದಿಲ್ಲ, ಬೇಕಾದರೆ 5ರೂ. ನಾಣ್ಯ ಕೊಡಿ ನೋಟು ಬೇಡ ಎನ್ನುತ್ತಿದ್ದಾರೆ ಬಳ್ಳಾರಿಯ ಜನತೆ.

ಹೌದು,ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಏಕಾಏಕಿ 500 ಮತ್ತು 1000 ರೂ. ಮುಖ ಬೆಲೆಯ ನೋಟು ಬಂದ್ ಮಾಡಿದಂತೆ 5 ರೂ ಮುಖ ಬೆಲೆಯ ನೋಟುಗಳನ್ನು ಕೂಡ ಬ್ಯಾನ್ ಮಾಡಿದ್ದಾರ ಎನ್ನುವ ಅನುಮಾನ ಇಲ್ಲಿ ಮೂಡುವು ಸಹಜ. ಈ ಹಿಂದೆ 10ರೂ. ನಾಣ್ಯಕ್ಕೂ ಇದೇ ಪರಿಸ್ಥಿತಿ ಬಂದಿತ್ತು.

New Delhi: Rs 500 and Rs 1000 notes which will be discontinued from Tuesday midnight as a step to curb black money. Prime Minister Narendra Modi said during his address to the nation in New Delhi on Tuesday. PTI Photo by Shahbaz Khan (PTI11_8_2016_000318B)

ಇದೀಗ 5 ರೂ ನೋಟು ಕೂಡ ನಗರದಲ್ಲಿ ಚಲಾವಣೆ ನಿಂತಿರುವುದಕ್ಕೆ ಜನ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ನಗರದ ಮಾರುಕಟ್ಟೆಯಲ್ಲಿ ಕೆಲ ದಿನಗಳಿಂದ 5 ರೂಪಾಯಿ ನೋಟಿಗೆ ಬೆಲೆಯೇ ಇಲ್ಲದಂತಾಗಿದೆ.

ಮಾರುಕಟ್ಟೆಯಲ್ಲಿ ಗ್ರಾಹಕರು ಈ ನೋಟು ಕೊಟ್ಟರೂ ವ್ಯಾಪಾರಿಗಳು ಅದನ್ನು ಸ್ವೀಕರಿಸುತ್ತಿಲ್ಲ.ಈ ನೋಟನ್ನು ಯಾರೂ ತೆಗೆದುಕೊಳ್ಳಲ್ಲ ಅದಕ್ಕೆ ನಾನೂ ಕೂಡ ಸ್ವೀಕರಿಸಲ್ಲ. ಗ್ರಾಹಕರು ಕೂಡ ಇದನ್ನು ಪಡೆಯಲ್ಲ. ಬ್ಯಾಂಕಿನವರು ತಗೊಳ್ತಾರೆ.

ಆದರೆ ಅಲ್ಲಿಗೆ ಹೋಗಿ ಡೆಪಾಸಿಟ್ ಮಾಡಲು ಗಂಟೆ ಗಟ್ಟಲೆ ಕಾಯಬೇಕಾಗುತ್ತದೆ ಅಂತ ಸ್ಥಳೀಯ ಅಂಗಡಿ ಮಾಲೀಕರು ಬೇಸರದಿಂದ ನುಡಿಯುತ್ತಾರೆ.

Leave a Reply

Your email address will not be published.