ನಮ್ಮವರೇ ತುಳಿಯುತ್ತಿರುವ ಈ ಕನ್ನಡದ ನಟನನ್ನು ನೆದರ್ಲ್ಯಾಂಡ್ಸ್ ನವರು ಕರೆದು ಬೆಸ್ಟ್ ಏಶಿಯನ್ ಆಕ್ಟರ್ ಅವಾರ್ಡ್ ಕೊಟ್ಟಿದ್ದಾರೆ

ನಮ್ಮವರೇ ತುಳಿಯುತ್ತಿರುವ ಈ ಕನ್ನಡದ ನಟನನ್ನು ನೆದರ್ಲ್ಯಾಂಡ್ಸ್ ನವರು ಕರೆದು ಬೆಸ್ಟ್ ಏಶಿಯನ್ ಆಕ್ಟರ್ ಅವಾರ್ಡ್ ಕೊಟ್ಟಿದ್ದಾರೆ

ಒಬ್ಬ ನಟ ಬೆಳೀತಾ ಇದ್ದಾನೆ ಅಂದ್ರೆ ಆತನಿಗೆ ಫ್ಯಾನ್ ಫಾಲೋಯಿಂಗ್ ದಿನೇದಿನೆ ಹೆಚ್ಚಾಗುತ್ತೆ ಅಭಿಮಾನಿಗಳು ಉತ್ಸವ ಮೂರ್ತಿಯಂತೆ ಮೆರವಣಿಗೆ ಮಾಡುಕೆ ಸಿದ್ಧರಾಗ್ತಾರೆ. ಮತ್ತೊಂದ್ಕಡೆ ಗುನ್ನಾ ಇಡೋಕೆ ಅಂತಾ ಶತ್ರುಗಳ ಸಂಖ್ಯೆ ಕೂಡ ಬೆಳಿತಾ ಹೋಗತ್ತೆ.

ಅದ್ರಲ್ಲೂ ವಿಕೃತ ಮನಸ್ಸುಗಳು ಹೇಗಾದ್ರೂ ಮಾಡಿ ಶತಾಯುಗತಾಯ ಇವ್ರನ ತುಳಿಯಲೇ ಬೇಕು ಅಂತ ಫಿಕ್ಸ್ ಆಗಿಬಿಡ್ತಾರೆ. ನಮ್ಮ ಇವತ್ತಿನ ಸ್ಟೋರಿ ಕೂಡ ಸೂಪರ್ ಸ್ಟಾರ್ ಆಗಿ ಬೆಳೆದಿದ್ದ ಅತ್ಯದ್ಭುತ ಕಲಾವಿದನ ರೋಚಕ ಜರ್ನಿ ಹಾಗೂ ಅದರ ಹಿಂದಿನ ಸತ್ಯಾಸತ್ಯತೆಗಳ ಓವರ್ ಲುಕ್ ಆಗಿದೆ.

ಆದ್ರೆ ಇಲ್ಲೋಬ್ಬಕಲಾವಿದ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ರು ಸಹ ಅವಕಾಶಗಳಿಲ್ಲದೇ ಪ್ರತಿ ದಿನ ಪ್ರತಿ ಕ್ಷಣ ತನ್ನ ಟೈಮಿಂಗ್ ಗಾಗಿ ಕಾಯ್ತಾ ಹೃದಯದಲ್ಲಿ ನೋವಿನ ಬೆಂಕಿ ಜ್ವಾಲೆಯಲ್ಲಿ ಜೀವಿಸುತ್ತಿದ್ದಾರೆ.

ಕಾರ್ತಿಕ್ ಜಯರಾಮ್ ಅಲಿಯಾಸ್ ಜೆ ಕೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, 2011 ರಲ್ಲಿ ಕೆಂಪೇಗೌಡ ಚಿತ್ರದ ಮೂಲಕ ಪರಿಚಯವಾದ ಈ ನಟ ಮುಂದೆ ಅಶ್ವಿನಿ ನಕ್ಷತ್ರ ಸೀರಿಯಲ್ ನಿಂದ ಸೂಪರ್ ಸ್ಟಾರ್ ಜೆ ಕೆ ಆಗಿ ಎಲ್ಲರ ಮನೆಮಾತಾದರು.

ಜೆ ಕೆ ಕನ್ನಡ ಕಿರುತೆರೆ ಹಾಗೂ ಚಿತ್ರರಂಗಗಳಲ್ಲಿ ಪ್ರಸಿದ್ಧಿಪಡೆದಿದ್ದಾರೆ. ಇವರು ಕಲರ್ಸ್ ವಾಹಿನಿಯಲ್ಲಿ ೨೦೧೩-೧೫ರಲ್ಲಿ ಪ್ರಸಾರಗೊಂಡ ಧಾರಾವಾಹಿಯಾದ ಅಶ್ವಿನಿ ನಕ್ಷತ್ರದಲ್ಲಿನ ಜೆ. ಕೃಷ್ಣ ಎಂಬ “ಸೂಪರ್‍ಸ್ಟಾರ್” ಪಾತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಿತರಾದರು.

ಇದೇ ಸಮಯದಲ್ಲಿ ಇವರು ಹಲವು ಚಲನಚಿತ್ರಗಳಲ್ಲಿ ಸಹನಟರಾಗಿ ಕೂಡ ಕಾಣಿಸಿಕೊಂಡರು. ೨೦೧೪ರಲ್ಲಿ ತೆರೆಕಂಡ ಜಸ್ಟ್ ಲವ್ ಚಿತ್ರದ ಮೂಲಕ ನಾಯಕ ನಟರಾದರು. ನಟನೆಯ ಜೊತೆಜೊತೆಗೆ ಇವರು ಇಂಜಿನಿಯರ್ ಆಗಿಯೂ ಕೆಲಸ ನಿರ್ವಹಿಸುತ್ತಾರೆ.

ಜೆಕೆ ಹಿಂದಿ ಕಿರುತೆರೆಯಲ್ಲಿ ರಾವಣನಾಗಿ ಮಿಂಚಿದ್ದು, ಮನೆ ಮಾತಾಗಿದ್ದಾರೆ. ಹೀಗಿರುವಾಗಲೇ ಅವರಿಗೆ ಕಾಲಿವುಡ್​ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು, ಸದ್ಯ ಈ ಚಿತ್ರದ ಟೈಟಲ್​ ಹಾಗೂ ಟೀಸರ್​ ಬಿಡುಗಡೆಯಾಗಿದೆ.

ಆ ಕರಾಳ ರಾತ್ರಿ ಸಿನಿಮಾದ ನಟನೆಗಾಗಿ ಜೆಕೆಗೆ ಸೈಮಾ ಬೆಸ್ಟ್ ಸಪೋರ್ಟಿಂಗ್ ಆಕ್ಟರ್ ಅವಾರ್ಡ್ ಸಿಕ್ಕು ಕೂಡ ಸೈಮಾ ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ. ಇದು ನಂಬೋಕ್ಕೆ ಕಷ್ಟ ಆದರೂ ನಂಬ್ಲೇಬೇಕು. ಆದ್ರೆ ಇದೇ ಜೆಕೆ ನಟಿಸಿರೋ ಪುಟ ನೂರ ಒಂಬತ್ತು ಅನ್ನು ಕ್ರೈಂ ಥ್ರಿಲ್ಲರ್ ಡ್ರಾಮಾ ಕ್ಕೆ ನೆದರ್ ಲೆಂಡ್ ನಲ್ಲಿ ನಡೆದ NVIIF ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಏಷ್ಯನ್ ಆ್ಯಕ್ಟರ್ ಅವಾರ್ಡ್ ದ್ವಿತೀಯ ಸ್ಥಾನ ದೊರೆತಿರುವುದು ಎಷ್ಟೋ ಮಂದಿಗೆ ಗೊತ್ತಿಲ್ಲ.

ಇನ್ನಾದರೂ ಜೆ ಕೆ ಗೆ ಕನ್ನಡದಲ್ಲಿ ಹೆಚ್ಚಾಗಿ ಅವಕಾಶ ಸಿಗಲಿ ಹಾಗೂ ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *