ತಿ*ದಲ್ಲಿ ಧಮ್ ಇದ್ದಿದ್ದರೆ ವಿಷ್ಣು ಸರ್ ಇದ್ದಾಗ ಹೇಳಬೇಕಿತ್ತು ಎಂದು ವಿಜಯ್ ರಂಗರಾಜುಗೆ ವಾರ್ನಿಂಗ್ ಕೊಟ್ಟ ನಟ ಚರಣ್ ರಾಜ್

ತಿ*ದಲ್ಲಿ ಧಮ್ ಇದ್ದಿದ್ದರೆ ವಿಷ್ಣು ಸರ್ ಇದ್ದಾಗ ಹೇಳಬೇಕಿತ್ತು ಎಂದು
ವಿಜಯ್ ರಂಗರಾಜುಗೆ ವಾರ್ನಿಂಗ್ ಕೊಟ್ಟ ನಟ ಚರಣ್ ರಾಜ್

‘ಸಾಹಸ ಸಿಂಹ’ ಡಾ ವಿಷ್ಣುವರ್ಧನ್ ಅವರ ಬಗ್ಗೆ ತೆಲುಗು ನಟ ವಿಜಯ್ ರಂಗರಾಜು ಅವರು ಬಾಯಿಗೆ ಬಂದಹಾಗೆ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದು ಈಗ ವಿಷ್ಣು ಅಭಿಮಾನಿಗಳಿಗೆ ಬೇಸರ ತರಿಸಿದೆ. ಈ ವಿಚಾರದ ಬಗ್ಗೆ ವಿಷ್ಣು ಅಳಿಯ ಅನಿರುದ್ಧ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯೆ ನೀಡುವ ನಟ ಚರಣ್ ರಾಜ್ ಕೂಡ ಈ ವಿಚಾರದ ಕುರಿತು ಖಾರವಾಗಿ ಮಾತನಾಡಿದ್ದಾರೆ.

ಕನ್ನಡ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನವಾಗಿ ಮಾತನಾಡಿರುವ ತೆಲುಗು ನಟ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಬೇಕು ಎಂದು ನಟ ಚರಣ್ ರಾಜ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಂದರ್ಶನ ಒಂದರಲ್ಲಿ ಮಾತನಾಡಿದ ನಟ ಚರಣ್ ರಾಜ್ ರವರು ಕರ್ನಾಟಕದಲ್ಲಿ ರಾಜಕುಮಾರವರನ್ನು ಬಿಟ್ಟರೆ ನ೦ತರದ ಸ್ಥಾನದಲ್ಲಿ ವಿಷ್ಣುವರ್ಧನ್ ಅವರನ್ನೇ ನಾವು ದೇವರನ್ನಾಗಿ ಕಾಣುವುದು, ಅಂತಹುದರಲ್ಲಿ ಅವರ ಬಗ್ಗೆ ಮಾತನಾಡುವುದು ಒಳ್ಳೆಯದಲ್ಲ ಎಂದಿದ್ದಾರೆ.

ಈ ಕೂಡಲೇ ಆ ವಿಜಯರಂಗರಾಜು ಕ್ಷಮೆ ಕೇಳಲಿಲ್ಲವೆಂದರೆ ದರ್ಶನ್ ಸುದೀಪ್ ಚಿರಂಜೀವಿ ರಜನಿಕಾಂತ್ ಇವರು ಸಮೇತ ಅವರ ಮನೆ ಮುಂದೆ ಧರಣಿ ಕೂರುವುದಾಗಿ ನಟ ಚರಣ್ ರಾಜ್ ಹೇಳಿದ್ದಾರೆ.

ತಿ*ದಲ್ಲಿ ಧಮ್ ಇದ್ದಿದ್ದರೆ ವಿಷ್ಣು ಸರ್ ಇದ್ದಾಗ ಹೇಳಬೇಕಿತ್ತು ಆಗ ಎಲ್ಲಿ ಹೋಗಿತ್ತು ನಿನ್ನ ಗಂಡಸ್ತನ ಎಂದು ಸೆಡೆ ವಿಜಯರಂಗರಾಜುಗೆ ನಟ ಚರಣ್ ರಾಜ್ ಕೇಳಿದ್ದಾರೆ.

ಈ ವಿಜಯ್ ರಂಗರಾಜು 35 ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಇನ್ನು ಬಿಗ್ ಬಾಸ್ ಪ್ರಥಮ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ರಂಗರಾಜು ಕುರಿತು ಬೇಸರ ಹೊರಹಾಕಿದ್ದರು. ಒಟ್ಟಾರೆಯಾಗಿ ವಿಷ್ಣುವರ್ಧನ್ ಕುಟುಂಬ ಸೇರಿದಂತೆ ಅವರು ಅಭಿಮಾನಿಗಳು ವಿಜಯ್ ರಂಗರಾಜುವಿಗೆ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *