ತನ್ನ 70 ಕೋಟಿ ಬೆಲೆಬಾಳುವ ಮನೆಯನ್ನು ಅನಾಥ ಮಕ್ಕಳ ಹೆಸರಿಗೆ ಬರೆದುಕೊಟ್ಟ ಖ್ಯಾತ ನಟ

ತನ್ನ 70 ಕೋಟಿ ಬೆಲೆಬಾಳುವ ಮನೆಯನ್ನು ಅನಾಥ ಮಕ್ಕಳ ಹೆಸರಿಗೆ ಬರೆದುಕೊಟ್ಟ ಖ್ಯಾತ ನಟ

ನಾವು ಮೇಲ್ ಬಂದಮೇಲೆ ಬಡವರಿಗೆ ಸಹಾಯ ಮಾಡಬೇಕೆಂದು ಎಷ್ಟೋ ಜನ ಅಂದುಕೊಳ್ಳುತ್ತಾರೆ. ಆದರೆ ಜನರು ಶ್ರೀಮಂತರಾದ ಮೇಲೆ ಅವರ ಖರ್ಚುಗಳು ಅಷ್ಟೇ ಜಾಸ್ತಿ ಆಗುತ್ತಲೇ ಇರುತ್ತದೆ. ಕೆಲವರು ಮಾತ್ರ ಅವರು ಅಂದುಕೊಂಡ ಹಾಗೆ ಬಡವರಿಗೆ ಸಹಾಯ ಮಾಡುತ್ತಾರೆ.

ತಮ್ಮನ್ನು ಮೇಲೆ ತಂದ ಜನಕ್ಕೆ ಏನಾದ್ರೂ ಮಾಡ್ಬೇಕು ಎಂದು ಕೆಲವು ಸ್ಟಾರ್ ಆಲೋಚನೆ ಮಾಡುತ್ತಾರೆ. ಆದ್ರೆ ಎಲ್ಲರೂ ಸಹಾಯ ಮಾಡುವುದಿಲ್ಲ.. ಈ ನಟ ಮಾತ್ರ ಎಪ್ಪತ್ತು ಕೋಟಿ ಬೆಲೆಬಾಳುವ ಮನೆಯನ್ನು ಅನಾಥ ಮಕ್ಕಳಿಗೆ ಕೊಟ್ಟು ಇಡೀ ಚಿತ್ರರಂಗ ಬಾಯಿ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿದ್ದಾರೆ.

ಅಷ್ಟಕ್ಕೂ ಈ ಖ್ಯಾತ ನಟ ಯಾರು ಗೊತ್ತಾ? ನಟ ಸೂರ್ಯ.. ತಮಿಳು ಚಿತ್ರರಂಗದ ಟಾಪ್ ನಟ ಇವರು ಹಾಗು ಇವರ ತಂದೆ ಕೂಡ ಒಳ್ಳೆಯ ನಟನಾಗಿ ಪ್ರಸಿದ್ಧಿ ಹೊಂದಿದ್ದಾರೆ. ತಮ್ಮ ತಂದೆ ನಟ ಆದರೂ ಸಹ ಆರಂಭದ ದಿನಗಳಲ್ಲಿ ಪಾಸ್ ಪೋರ್ಟ್ ಕಂಪನಿಯಲ್ಲಿ 720 ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದರು.

ನಂತರ ಟಾಪ್ ಹೀರೋ ಆಗಿ ಬೆಳೆದಿರುವ ನಟ ಸೂರ್ಯ ಅಭಿಮಾನಿಗಳಿಗೆ ತುಂಬಾ ಗೌರವ ಕೊಡುತ್ತಾರೆ. ಇತ್ತೀಚೆಗೆ ತನ್ನ ಕಾಲಿಗೆ ನಮಸ್ಕರಿಸಿದ ಅಭಿಮಾನಿಗಳ ಕಾಲಿಗೆ ನಮಸ್ಕರಿಸಿ ದಯವಿಟ್ಟು ನನ್ನ ಕಾಲಿಗೆ ನಮಸ್ಕರಿಸಬೇಡಿ ಎಂದು ಕೇಳಿಕೊಂಡು.

ಸೂರ್ಯ ಮತ್ತು ಅವರ ತಮ್ಮ ಕಾರ್ತಿಕ್ ಮದುವೆಯಾದ ಮೇಲೂ ಪೋಷಕರ ಜೊತೆ ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಿದ್ದಾರೆ. ಒಂದೇ ಊರಿನಲ್ಲಿ ಇದ್ದು ಬೇರೆ ಬೇರೆ ಮನೆಯಲ್ಲಿ ವಾಸ ಮಾಡುವುದು ಅವರಿಗೆ ಇಷ್ಟವಿಲ್ಲ ಹಾಗಾಗಿ ಜೀವನ ಪೂರ್ತಿ ಒಂದೇ ಮನೆಯಲ್ಲಿ ತಂದೆ ತಾಯಿ ಜೋತೆ ವಾಸ ಮಾಡುವುದಾಗಿ ಹೇಳಿದ್ದಾರೆ.

ಸೂರ್ಯ ಅವರು ಚೆನ್ನೈನ ಪ್ರತಿಷ್ಠಿತ ಏರಿಯಾದಲ್ಲಿ ಪೋಷಕರ ಜೋತೆ ವಾಸವಿದ್ದರು. ಆದರೆ ಅವರ ಕುಟುಂಬಕ್ಕೆ ಆ ಮನೆಯೂ ಅಷ್ಟು ಸರಿಹೋಗುತ್ತಿರಲಿಲ್ಲ. ಹಾಗಾಗಿ ಒಂದು ಹೊಸ ಮನೆಯನ್ನು ಕಟ್ಟಿಸಿ ಅಲ್ಲಿಗೆ ಹೋಗಲು ನಿರ್ಧರಿಸುತ್ತಾರೆ.

ಇವರ ಹಳೇ ಮನೆಯನ್ನು ಮಾರಲು ಇಷ್ಟಪಡದೆ ಎಪ್ಪತ್ತು ಕೋಟಿ ಬಾಳುವ ಆ ಮನೆಯನ್ನು ಅನಾಥ ಮಕ್ಕಳಿಗೆ ಬರೆದುಕೊಟ್ಟಿದ್ದಾರೆ. ಎಂತಹ ಒಳ್ಳೆಯ ಮನಸ್ಸು ಅಲ್ವೇ? ಹಣ ಹಿಂದೆ ಓಡುವ ಜನರ ಮುಂದೆ ಮಾನವೀಯತೆಯ ಮೌಲ್ಯಗಳ ಹಿಂದೆ ಓಡುತ್ತಿರುವ ಸೂರ್ಯ ನಿರ್ಧಾರವನ್ನ ಮೆಚ್ಚಲೇಬೇಕು.

Leave a Reply

Your email address will not be published. Required fields are marked *