ಜಾಕಿ ಚಾನ್ ತನ್ನ ಮಗಳನ್ನ ಬೀದಿಗೆ ನೂಕಿದ ಕಾರಣ ಏನು ಗೊತ್ತಾ

ಜಾಕಿ ಚಾನ್ ತನ್ನ ಮಗಳನ್ನ ಬೀದಿಗೆ ನೂಕಿದ ಕಾರಣ ಏನು ಗೊತ್ತಾ

Never meet your heroes/idols ಎಂಬ ಮಾತಿದೆ. ಈ ಮಾತಿನ ಅರ್ಥವೇನೆಂದರೆ ನಾವು ಚಿಕ್ಕ ವಯಸ್ಸಿನಿಂದಲೂ ಒಬ್ಬರನ್ನು ನಮ್ಮ ಸ್ಫೂರ್ತಿಯಾಗಿ ಇಟ್ಟುಕೊಂಡು ಮುಂದೆ ಬಂದಿರುತ್ತೇವೆ ಆದರೆ ಆ ವ್ಯಕ್ತಿಯನ್ನು ಭೇಟಿಯಾದ ಮೇಲೆ ಅವರ ಗುಣಗಳು ಇಷ್ಟವಾಗಿಲ್ಲ ಎಂದರೆ ಮನಸ್ಸಿಗೆ ಬಹಳ ದುಃಖವಾಗುತ್ತದೆ. 

ತನ್ನ ಪ್ರಸಿದ್ಧಿಗೆ ತನ್ನ ಪ್ರತಿಭೆಗೆ ತನ್ನ ಸ್ಟೇಟಸ್ ಗೆ ಯಾರಾದ್ರೂ ಅಡ್ಡ ಬಂದ್ರೆ, ಅದು ಮಕ್ಕಳೇ ಆಗಿರಲಿ ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಈ ನಟ ಏಷ್ಯಾದಲ್ಲಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ ಹೀರೋ, ಆದ್ರೆ ಮಗಳು ಮಾತ್ರ ತಿನ್ನಲು ಊಟ ಇಲ್ಲದೆ ಪುಟ್ಪಾತ್ ನಲ್ಲಿ ಮಲಗಿ ಜೀವನ ಸಾಗಿಸುತ್ತಿದ್ದಾಳೆ.

ಆಕೆ ಮತ್ಯಾರೂ ಅಲ್ಲ,ಜಾಕಿಚಾನ್ ಮಗಳು. ಅಷ್ಟಕ್ಕೂ ಆಗಿರುವ ಸಮಸ್ಯೆ ಏನು ಗೊತ್ತಾ, ಜಾಕಿ ಚಾನ್ ಮಗಳು ಎಟ್ಟ ಲೆಸ್ಬಿಯನ್ ಎಂಬ ಈ ವಿಷ್ಯ ಪ್ರಪಂಚಕ್ಕೆಲ್ಲ ಗೊತ್ತಾದ ತಕ್ಷಣ ಜಾಕಿಚಾನ್ ತಮ್ಮ ಮಗಳನ್ನು ಮನೆಯಿಂದ ಆಚೆ ನೂಕಿದರು. 

ಐಷಾರಾಮಿ ಜೀವನ ನಡೆಸುತ್ತಿದ್ದ ಮಗಳು ಸರಳವಾಗಿ ಬೀದಿಗೆ ಬಂದಾಗ ಆಕೆಯ ಕಥೆ ಏನು. ಜಾಕಿಚಾನ್ ಮಗಳು ಏಟ ತನ್ನ ಪ್ರೇಯಸಿ ಜೊತೆ ಜೀವನ ಕಟ್ಟಿಕೊಳ್ಳಲು ಪರದಾಡುತ್ತಿದ್ದು ಈಗ ಇವರ ಬಳಿ ಊಟ ಮನೆ ಹಣ ಇಲ್ಲ. ಫುಟ್ಪಾತ ಹಾಗೂ ಬ್ರಿಡ್ಜ್ ಕೆಳಗೆ ಮಲಗಿ ಇಬ್ಬರು ಜೀವನ ಸಾಗಿಸುತ್ತಿದ್ದಾರೆ. 

ತಮ್ಮ ಸ್ಥಿತಿಯ ಬಗ್ಗೆ ವಿಡಿಯೋ ಮಾಡಿರುವ ಜಾಕಿಚಾನ್ ಮಗಳು ನನ್ನ ಈ ಸ್ಥಿತಿಗೆ ನನ್ನ ಪೋಷಕರೇ ಕಾರಣ. ನಾನು ಮಾಡಿದ ತಪ್ಪಾದರೂ ಏನು? ಆಸ್ಪತ್ರೆಯ ಸಹಾಯ ಮಕ್ಕಳ ಸಹಾಯ ಎಲ್ಲ ಕಡೆ ಸಹಾಯ ಕೇಳಿದರೂ ಯಾರೂ ನನಗೆ ಸಹಾಯ ಮಾಡಲಿಲ್ಲ. 

ಬ್ರಿಡ್ಜ್ ಕೆಳಗೆ ಹಾಗೂ ಬೇರೆ ಬೇರೆ ಸ್ಥಳಗಳಲ್ಲಿ ರಾತ್ರಿ ಕಳೆಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾಳೆ. ಜಾಕಿಚಾನ್ ಇದರ ಬಗ್ಗೆ ಏನೂ ಮಾತನಾಡಲಿಲ್ಲ. ಆದರೆ ತನ್ನ ಮಗಳು ಸಲಿಂಗಕಾಮಿಯೆಂದು ಒಪ್ಪಿಕೊಂಡಿದ್ದಾರೆ. 

ಜಾಕಿಚಾನ್ ಹೆಂಡತಿ ಇದರ ಬಗ್ಗೆ ಮಾತನಾಡಿ ಅವಳಿಗೆ ದುಡ್ಡಿನ ಅವಶ್ಯಕತೆ ಇದ್ದರೆ ಕೆಲ್ಸಕ್ಕೆ ಸೇರಿ ದುಡ್ಡು ಸಂಪಾದಿಸಿಕೊಳ್ಳಲಿ ಎಂದು ಹೇಳಿದ್ದಾರೆ. ಸಿನಿಮಾಗಳಲ್ಲಿ ಸಭೆಗಳಲ್ಲಿ ಉದ್ದುದ್ದ ಭಾಷಣ ಬಿಗಿಯುವ ಕೆಲವು ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ವಿಷಯದಲ್ಲಿ ಮಾತ್ರ ಮಾನವೀಯತೆಯನ್ನು ತೋರಿಸುವುದಿಲ್ಲ. 

ಐಷಾರಾಮಿ ಜೀವನ ನಡೆಯಬೇಕಿದ್ದ ಮಗಳನ್ನು ಸಲಿಂಗಕಾಮಿ ಎಂಬ ಒಂದೇ ಒಂದು ಕಾರಣಕ್ಕೆ ಮನೆಯಿಂದ ಹೊರಗೆ ಹಾಕಿದರು. ಜವಾಬ್ದಾರಿಯುತ ತಂದೆಯ ಸ್ಥಾನದಲ್ಲಿ ಜಾಕಿಚಾನ್ ಇರ ಬೇಕು ಎಂದು ಜನ ಹೇಳುತ್ತಿದ್ದಾರೆ. ಹೈ ಪ್ರೊಫೈಲ್ ಬಲೆಯಲ್ಲಿ ಬಿದ್ದ ಕೆಲವು ಸೆಲೆಬ್ರಿಟಿಗಳು ಪ್ರತಿಭೆಗೆ ಯಾರೇ ಅಡ್ಡ ಬಂದ್ರೂ ಸಹಿಸುವುದಿಲ್ಲ.

ಓದುವ ವಯಸ್ಸಿನಲ್ಲಿ ಮಗಳನ್ನು ಮನೆಯಿಂದ ಆಚೆ ಹಾಕಿದರೆ ಅವಳು ಎನಾಗಬೇಕು? ಅವಳ ಭವಿಷ್ಯ ಏನಾಗುತ್ತದೆಂದು ಚಿಂತಿಸಿಲ್ಲ ಈ ಸೂಪರ್ ಸ್ಟಾರ್ ಅನ್ನೋದು ಎಷ್ಟು ಜನರಿಗೆ ಬೇಜಾರು ತರಿಸಿದೆ. ಪ್ರಕೃತಿಯಲ್ಲಾಗುವ ಬದಲಾವಣೆಗಳನ್ನು ದೂಷಿಸುವ ಬದಲು ಅವಳಿಗೆ ಒಳ್ಳೆಯ ಜೀವನ ರೂಪಿಸುವತ್ತ ನಟ ಜಾಕಿಚಾನ್ ಮುಂದಾಗಲಿ ಎಂದು ಭಾವಿಸೋಣ. 

Leave a Reply

Your email address will not be published. Required fields are marked *