ಗಂಡ ಮತ್ತು ಮಕ್ಕಳು ಟಾಪ್ ನಟರಾಗಿದ್ದರು ಅನಾಥೆ ಆದ ಈ ದುರದೃಷ್ಟ ನಟಿ

ಗಂಡ ಮತ್ತು ಮಕ್ಕಳು ಟಾಪ್ ನಟರಾಗಿದ್ದರು ಅನಾಥೆ ಆದ ಈ ದುರದೃಷ್ಟ ನಟಿ

ನಟ ಹಾಗೂ ನಟಿ ಮದುವೆಯಾದರೆ ಅವರ ಸಾಂಸಾರಿಕ ಜೀವನದಲ್ಲಿ ಬಹಳ ಕಲಹಗಳು ಬರುತ್ತದೆ ಎಂಬ ಮೂಢ ನಂಬಿಕೆ ಇದೆ. ನಟಿ ಸಾರಿಕಾ ಒಂದು ಕಾಲದಲ್ಲಿ ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿ ಟಾಪ್ ನಟಿಯಾಗಿ ನೆಲೆಯೂರಿದ್ದ ನಟಿ.

ಭಾರಿ ಬೇಡಿಕೆ ಇರುವಾಗಲೇ ತನ್ನ ತಾಯಿಯ ಮಾತಿನ ವಿರುದ್ಧವಾಗಿ ಕಮಲ್ ಹಾಸನ್ ರನ್ನು ಪ್ರೀತಿಸಿ ಮದುವೆಯಾದ ಸಾರಿಕಾ ಚಿತ್ರರಂಗದಿಂದ ದೂರವಾಗಿ ಸಂಸಾರದಲ್ಲಿ ತೊಡಗಿಸಿಕೊಂಡರು.

ಕಮಲ್ ಮತ್ತು ಸಾರಿಕಾಗೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟುತ್ತಾರೆ ಅವರೇ ಶ್ರುತಿ ಹಾಸನ್ ಮತ್ತು ಅಕ್ಷರ ಹಾಸನ್. ಪೋಷಕರ ಮಾತಿಗೆ ಬೆಲೆ ಕೊಡದೆ ಅವರನ್ನು ಎದುರು ಹಾಕಿಕೊಂಡು ಕಮಲ್ ಹಾಸನ್ ರನ್ನು ಮದುವೆಯಾಗಿದ್ದರು ಸಾರಿಕ.

ಮಕ್ಕಳು ಹುಟ್ಟಿದ ಮೇಲೆ ಈ ನಟಿಯ ಜೀವನದಲ್ಲಿ ಏನಾಯ್ತು ಗೊತ್ತಾ?ಯಥಾಪ್ರಕಾರ ಕಮಲ್ ಮತ್ತು ಸಾರಿಕಾ ಮಧ್ಯೆ ಬ್ರೇಕಪ್ ಆಗಿ ವಿಚ್ಛೇದನ ಪಡೆದುಕೊಂಡರು. ಇಬ್ಬರು ಮಕ್ಕಳೊಂದಿಗೆ ಮುಂಬೈಗೆ ಉದ್ಯೋಗ ಬಯಸಿ ಹೋದ ಸಾರಿಕಾ ಅಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸಿ ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದರು.

ದೊಡ್ಡೋರಾದ ಹೆಣ್ಣುಮಕ್ಕಳು ಅವರ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದ್ರೆ ನಟಿ ಸಾರಿಕಾ ಮಾತ್ರ ಒಂದು ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಬಾಡಿಗೆ ಮನೆಯಲ್ಲಿರುವ ಸಾರಿಕಾಗೆ ಒಂದು ಭರವಸೆ ಇತ್ತು ಅದು ಏನೆಂದರೆ ತಾಯಿಗಿರುವ ನೂರಾರು ಕೋಟಿ ಆಸ್ತಿ, ಐಷಾರಾಮಿ ಬಂಗಲೆ ಹಾಗೂ ಮುನ್ನೂರು ಎಕರೆ ಜಮೀನು ತನಗೆ ಸಿಗುತ್ತದೆಯೆಂದು.

ಆದರೆ ಆಗಿದ್ದೇನು ಗೊತ್ತಾ? ಇತ್ತೀಚೆಗೆ ನಟಿ ಸಾರಿಕಾ ಅವರ ತಾಯಿ ತೀರಿಕೊಂಡರು. ಆಗ್ಲೆ ಗೊತ್ತಾಗಿದ್ದು ತನ್ನನ್ನು ನೋಡಿಕೊಳ್ಳುತ್ತಿದ್ದ ಡಾಕ್ಟರ್ ಹೆಸರಿಗೆ ಎಲ್ಲಾ ಆಸ್ತಿಯನ್ನು ಸಾರಿಕಾ ಅವರ ತಾಯಿ ಬರೆದಿದ್ದಾರೆ ಎಂದು. ತಾಯಿಯ ಆಸ್ತಿಯ ಭರವಸೆಯನ್ನು ಕಳೆದುಕೊಂಡಿರುವ ಸಾರಿಕಾ ಅವರು ತಾಯಿ ಆಸ್ತಿ ತನಗೆ ಬರಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಾರೆ.

ಎಂಥ ಸ್ಥಿತಿ ನೋಡಿ, ಇಷ್ಟೆಲ್ಲಾ ಆದರು ತಮ್ಮ ಸ್ವಾಭಿಮಾನವನ್ನು ಕಳೆದುಕೊಳ್ಳದೆ ಸಾರಿಕಾ ಅವರು ಬಾಡಿಗೆ ಮನೆಯಲ್ಲಿ ಸಾಮಾನ್ಯ ಮಹಿಳೆಯಂತೆ ವಾಸವಿದ್ದಾರೆ. ನಟಿ ಸಾರಿಕಾ ಸ್ಥಿತಿಯನ್ನು ನೋಡಿದ ಅಮೀರ್ ಖಾನ್ ಮುಂದೆ ಬಂದು ಸಾರಿಕಾ ಕೋರ್ಟ್ ಖರ್ಚು ಭರಿಸುವದಾಗಿ ಹೇಳಿದರು.

ಅದರ ಜೊತೆಗೆ ಸಂಧಾನದ ಮೂಲಕ ಕೋರ್ಟ್ ನಲ್ಲಿರುವ ವ್ಯಾಜ್ಯವನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಅವರ ತಾಯಿಯ ಆಸ್ತಿಯಲ್ಲಿ ಸ್ವಲ್ಪ ಭಾಗ ನಟಿ ಸಾರಿಕಾ ಅವ್ರಿಗೆ ಸಿಕ್ಕಿ ಸಂತೋಷದ ಜೀವನ ನಡೆಸಲಿ ಎಂದು ಭಾವಿಸುತ್ತೇವೆ.

Leave a Reply

Your email address will not be published. Required fields are marked *