ಕೊನೆಗೂ ಮಂಡಿಯೂರಿ ವಿಷ್ಣು ಅಭಿಮಾನಿಗಳಿಗೆ ಹಾಗೂ ಕನ್ನಡ ಜನತೆಗೆ ಕ್ಷಮೆ ಕೇಳಿದ ವಿಜಯ್ ರಂಗರಾಜು

ಕೊನೆಗೂ ಮಂಡಿಯೂರಿ ವಿಷ್ಣು ಅಭಿಮಾನಿಗಳಿಗೆ ಹಾಗೂ ಕನ್ನಡ ಜನತೆಗೆ ಕ್ಷಮೆ ಕೇಳಿದ ವಿಜಯ್ ರಂಗರಾಜು.

ಕನ್ನಡ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನವಾಗಿ ಮಾತನಾಡಿರುವ ತೆಲುಗು ನಟ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಬೇಕು ಎಂದು ಎಲ್ಲರು ಪ್ರತಿಭಟನೆ ಮಾಡಿದ್ದರು.

‘ಸಾಹಸ ಸಿಂಹ’ ಡಾ ವಿಷ್ಣುವರ್ಧನ್ ಅವರ ಬಗ್ಗೆ ತೆಲುಗು ನಟ ವಿಜಯ್ ರಂಗರಾಜು ಅವರು ಬಾಯಿಗೆ ಬಂದಹಾಗೆ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದು ಈಗ ವಿಷ್ಣು ಅಭಿಮಾನಿಗಳಿಗೆ ಬೇಸರ ತರಿಸಿದೆ. ಈ ವಿಚಾರದ ಬಗ್ಗೆ ವಿಷ್ಣು ಅಳಿಯ ಅನಿರುದ್ಧ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಕರ್ನಾಟಕದಲ್ಲಿ ರಾಜಕುಮಾರವರನ್ನು ಬಿಟ್ಟರೆ ನ೦ತರದ ಸ್ಥಾನದಲ್ಲಿ ವಿಷ್ಣುವರ್ಧನ್ ಅವರನ್ನೇ ನಾವು ದೇವರನ್ನಾಗಿ ಕಾಣುವುದು, ಅಂತಹುದರಲ್ಲಿ ಅವರ ಬಗ್ಗೆ ಮಾತನಾಡುವುದು ಒಳ್ಳೆಯದಲ್ಲ ಎಂದು ಕನ್ನಡಿಗರು ಗುಡುಗಿದ್ದರು.

ಈಗ ವಿಜಯ್ ರಂಗರಾಜು ರವರು ಒಂದು ವಿಡಿಯೋ ಮಾಡುವ ಮೂಲಕ ತಾನು ದೊಡ್ಡ ತಪ್ಪು ಮಾಡಿರುವುದಾಗಿ ತಿಳಿಸಿ ಕರ್ನಾಟಕದ ಜನತೆ ತನ್ನನ್ನು ಕ್ಷಮಿಸ ಬೇಕೆಂದು ಅಳಲು ತೋಡಿಕೊಂಡಿದ್ದಾರೆ.

ಆ ವಿಡಿಯೋದಲ್ಲಿ ವಿಜಯ್ ರಂಗರಾಜು ಮಂಡಿಯೂರಿ ವಿಷ್ಣು ಅಭಿಮಾನಿಗಳಿಗೆ
ಹಾಗೂ ಕನ್ನಡ ಜನತೆಗೆ ಕ್ಷಮೆ ಕೇಳುತ್ತಿದ್ದೇನೆ, ಯಾವುದೋ ಕೋಪದಲ್ಲಿ ಆ ತರಹದ ಮಾತುಗಳನ್ನು ವಿಷ್ಣುವರ್ಧನ್ ಅವರ ಮೇಲೆ ಪ್ರಯೋಗಿಸಿದೆ ಎಂದು ಹೇಳಿಕೊಂಡು ಅಳುತ್ತಿದ್ದಾನೆ.

ಈ ವಿಜಯ್ ರಂಗರಾಜು 35 ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಇನ್ನು ಬಿಗ್ ಬಾಸ್ ಪ್ರಥಮ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ರಂಗರಾಜು ಕುರಿತು ಬೇಸರ ಹೊರಹಾಕಿದ್ದರು. ಒಟ್ಟಾರೆಯಾಗಿ ವಿಷ್ಣುವರ್ಧನ್ ಕುಟುಂಬ ಸೇರಿದಂತೆ ಅವರು ಅಭಿಮಾನಿಗಳು ವಿಜಯ್ ರಂಗರಾಜುವಿಗೆ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *