ಕದ್ದು ಸಿನೆಮಾ ನೋಡಲು ಹೋದವನಿಗೆ ಸಿಕ್ತು ಕೆಲಸ, ಇಲ್ಲಿದೆ ಸಂಪೂರ್ಣ ಮಾಹಿತಿ.. 

ಕದ್ದು ಸಿನೆಮಾ ನೋಡಲು ಹೋದವನಿಗೆ ಸಿಕ್ತು ಕೆಲಸ, ಇಲ್ಲಿದೆ ಸಂಪೂರ್ಣ ಮಾಹಿತಿ..

ಎಲ್ಲಾ ಪೊಲೀಸರೂ ಕಠೋರವಾಗಿರುವುದಿಲ್ಲ. ಅವರಿಗೂ ಒಂದು ಹೂವಿನಂತಹ ಹೃದಯ ಮತ್ತು ಮಾನವೀಯತೆ ಇರುತ್ತದೆ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ.

ಉತ್ತರ ಕರ್ನಾಟಕ ಮೂಲದ ಕಡುಬಡತನದ ಕುಟುಂಬದಿಂದ ಬಂದ ಸುರೇಶ್ ಎಂಬ ಯುವಕ ತನ್ನ ನೆಚ್ಚಿನ ಹೀರೋ ಪ್ರಭಾಸ್ ಅಭಿನಯದ ಸಾಹೋ ಚಿತ್ರವನ್ನು ನೋಡುವ ಆಸೆ ಹೊಂದಿದ್ದ. ಆದರೆ, ಹಣವಿಲ್ಲದ ಕಾರಣ ನೇರವಾಗಿ ಪಿವಿಆರ್ ಗೆ ಹೋಗಿ ಟಿಕೆಟ್ ಇಲ್ಲದೇ ಒಳನುಗ್ಗಲು ಪ್ರವೇಶಿಸಿದಾಗ ಸಿಬ್ಬಂದಿ ಹಿಡಿದು ಆಡುಗೋಡಿ ಪೊಲೀಸ್ ಇನ್ಸ್ ಪೆಕ್ಟರ್ ದಿಲೀಪ್ ಅವರ ಕೈಗೆ ಒಪ್ಪಿಸಿದ್ದರು.

ಸುರೇಶ್ ನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ತನ್ನ ಕುಟುಂಬದ ಹಿನ್ನೆಲೆ ಮತ್ತು ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬಂದರೂ ಉದ್ಯೋಗ ಸಿಗದಿದ್ದುದನ್ನು ಹೇಳಿಕೊಂಡಿದ್ದಾನೆ. ಈ ಕಷ್ಟಗಳನ್ನು ಆಲಿಸಿದ ದಿಲೀಪ್, ಸುರೇಶನಿಗೆ ಹೊಸ ಬಟ್ಟೆ, ಊಟೋಪಚಾರ ಮಾಡಿದ್ದಷ್ಟೇ ಅಲ್ಲ, ತಮ್ಮ ಠಾಣೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮತ್ತು ಠಾಣೆಗೆ ಸನಿಹದಲ್ಲೇ ಇರುವ ಹೊಟೇಲ್ ವೊಂದರಲ್ಲೂ ಕೆಲಸ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

Leave a Reply

Your email address will not be published. Required fields are marked *