ಊಟವನ್ನು ಬೇಡ ಎಂದಾಗ ರಾಜಣ್ಣನವರು ‘ನೀವು ಊಟ ತಿನ್ನುತ್ತೀರಾ ಇಲ್ಲ ನಿಮ್ಮ ಪಾಲಿನ ಊಟವನ್ನು ನಾನೇ ತಿನ್ನುಲ’ ಎಂದು ಯಾವ ನಟನಿಗೆ ಹೇಳಿದರು ಗೊತ್ತಾ

ಊಟವನ್ನು ಬೇಡ ಎಂದಾಗ ರಾಜಣ್ಣನವರು
‘ನೀವು ಊಟ ತಿನ್ನುತ್ತೀರಾ ಇಲ್ಲ ನಿಮ್ಮ ಪಾಲಿನ ಊಟವನ್ನು
ನಾನೇ ತಿನ್ನುಲ’ ಎಂದು ಯಾವ ನಟನಿಗೆ ಹೇಳಿದರು ಗೊತ್ತಾ

ದಯವಿಟ್ಟು ಎಲ್ಲಾ ರಾಜವಂಶದ ಅಭಿಮಾನಿಗಳು ಈ ಮಾಹಿತಿಯನ್ನು ಹೆಚ್ಚು ಓದಿ ಹಾಗೂ ಶೇರ್ ಮಾಡಿ, ಈ ಮಾಹಿತಿಯನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಅಜಯ್ ರಾವ್ ಅವರು ಟಿವಿ ಕಾರ್ಯಕ್ರಮವೊಂದರಲ್ಲಿ ನೀಡಿದ್ದಾರೆ.ಒಮ್ಮೆ ನಮ್ಮ ಕರುನಾಡ ಚಕ್ರವರ್ತಿ ಡಾ ಶಿವಣ್ಣ ಅವರು ದೊಡ್ಡಮನೆಯ ಕಾರ್ಯಕ್ರಮಕ್ಕೆ ಅಜಯ್ ರಾವ್ ಅವರನ್ನು ಕರೆದಿರುತ್ತಾರೆ.ಆಗ ಅಜಯ್ ರಾವ್ ಅವರು ಕಾರ್ಯಕ್ರಮಕ್ಕೆ ಬರುವ ಮುನ್ನ ಮನೆಯಲ್ಲಿಯೇ ಊಟ ಮಾಡಿ ಬಂದಿರುತ್ತಾರೆ.ಮನೆಗೆ ಬಂದ ಅಜಯ್ ರಾವ್ ಅವರನ್ನು ನಮ್ಮ ಕರುನಾಡ ದೇವರು ಡಾ.ರಾಜಣ್ಣ ಅವರು ಖುಷಿಯಿಂದ ಒಳಗೆ ಕರೆದುಕೊಂಡು ಹೋಗುತ್ತಾರೆ.

ಪೂಜಾ ಕಾರ್ಯಕ್ರಮ ಮುಗಿದ ಮೇಲೆ ಎಲ್ಲರೂ ಊಟ ಮಾಡಲು ಮುಂದಾಗುತ್ತಾರೆ. ಆಗ ಅಜಯ್ ರಾವ್ ಅವರು ಊಟ ಮಾಡದೇ ಹೊರಡಲು ಸಿದ್ದರಾಗುತ್ತಾರೆ.

ಇದನ್ನು ಗಮನಿಸಿದ ಡಾ.ರಾಜಣ್ಣ ಅವರು ಊಟ ಮಾಡಲೇ ಬೇಕು ಎಂದು ಅಜಯ್ ರಾವ್ ಅವರ ಬಳಿ ಬಂದು ಹೇಳುತ್ತಾರೆ.

ಅದಕ್ಕೆ ಒಪ್ಪಿದ ಅಜಯ್ ಊಟ ಮಾಡಲು ಬಂದಾಗ ಊಟ ಬಡಿಸುವವರು ಅಜಯ್ ಅವರ ಪರಿಸ್ಥಿತಿ ಗೊತ್ತಿಲ್ಲದೆ ಹೆಚ್ಚು ಊಟ ಬಡಿಸುತ್ತಾರೆ.

ಆಗ ಊಟ ತಿನ್ನಲಾಗದೇ ಕಷ್ಟಪಡುತ್ತಿರುವ ಅಜಯ್ ರಾವ್ ಅವರನ್ನು ಡಾ.ರಾಜಣ್ಣ ನೋಡಿ ಏಕೆ? ಕಂದ ಊಟ ಚೆನ್ನಾಗಿ ಇಲ್ಲವೇ ಎಂದು ಕೇಳುತ್ತಾರೆ.

ಆಗ ಅಜಯ್ ಊಟ ಚೆನ್ನಾಗಿದೆ ಆದರೆ ತಿನ್ನಲು ಆಗುತ್ತಿಲ್ಲ ಅಣ್ಣ ಎನ್ನುತ್ತಾರೆ. ಆಗ ಡಾ. ರಾಜಣ್ಣ ಅವರು ಊಟವನ್ನು ಹಾಳು ಮಾಡಬಾರದು ನೀವು ಊಟ ತಿನ್ನುತ್ತೀರಾ

ಇಲ್ಲ ನಿಮ್ಮ ಪಾಲಿನ ಊಟವನ್ನು ನಾನೇ ತಿನ್ನುತ್ತೇನೆ ಎನ್ನುತ್ತಾರೆ.ಆಗ ಅಜಯ್ ರಾವ್ ಅವರು ಬೇಡ ಅಣ್ಣ ನಾನೇ ತಿನ್ನುವೆ ಎಂದು ಎಲ್ಲಾ ಊಟವನ್ನು ತಿನ್ನುತ್ತಾರೆ.ಇದು ನಮ್ಮ ಡಾ.ರಾಜಣ್ಣ ಅವರಿಗೆ ಅನ್ನದ ಮೇಲೆ ಇದ್ದ ಗೌರವ.

Leave a Reply

Your email address will not be published. Required fields are marked *