ಈ ಕನ್ನಡದ ನಟ ಹೇಮಾ ಮಾಲಿನಿಯ ಪ್ರೀತಿಯನ್ನು ತಿರಸ್ಕರಿಸಿದ್ದರು 

ಈ ಕನ್ನಡದ ನಟ ಹೇಮಾ ಮಾಲಿನಿಯ ಪ್ರೀತಿಯನ್ನು ತಿರಸ್ಕರಿಸಿದ್ದರು 

ಹೇಮಾಮಾಲಿನಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬಾಲಿವುಡ್ ನ ಕನಸಿನ ರಾಣಿ ಎಂದರೆ ಹೇಮಮಾಲಿನಿ. ಈ ನಟಿಯ ಪ್ರೀತಿಗಾಗಿ ದೊಡ್ಡ ದೊಡ್ಡ ಸ್ಟಾರ್ ನಟರು ಪ್ರಯತ್ನ ಪಟ್ಟರು. ಆದ್ರೆ ಹೇಮಮಾಲಿನಿಯ ಕುಟುಂಬ ಕನ್ನಡದ ಖ್ಯಾತ ನಟನ ಬಗ್ಗೆ ಒಲವು ತೋರಿ ಹೇಮಮಾಲಿನಿಯವರನ್ನು ಮದುವೆಯಾಗು ಎಂದು ಕೇಳಿದರು. 

ಹಿಂದೆ ಮುಂದೆ ನೋಡದೆ ಅವರ ಮನವಿಯನ್ನು ತಿರಸ್ಕರಿಸಿದ್ದ ಖ್ಯಾತ ನಟ ಯಾರು ಗೊತ್ತಾ? ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ಕೊಟ್ಟ ಧೀಮಂತ ಸಾಹಿತಿ ನಟ ಗಿರೀಶ್ ಕಾರ್ನಾಡ್. ಅವರು ಆಲೋಚನೆಗಳೂ ಏನೆ ಇದ್ದರೂ ಅವನ್ನೆಲ್ಲ ಪಕ್ಕಕ್ಕಿಟ್ಟು ನೋಡುವುದಾದರೆ, ಕನ್ನಡ ಸಾಹಿತ್ಯ ಲೋಕದಲ್ಲಿ ಗಿರೀಶ್ ಕಾರ್ನಾಡ್ ಅವರ ಹೆಸರು ಅಜರಾಮರ. 

ಬಾಲಿವುಡ್ ಡ್ರೀಮ್ ಗರ್ಲ್ ಆಗಿದ್ದ ಹೇಮಮಾಲಿನಿಯವರ ಪ್ರೀತಿಯನ್ನೇ ಗಿರೀಶ್ ಕಾರ್ನಾಡ್ ಅವರು ತಿರಸ್ಕರಿಸಿದ್ದರು. ಈ ಘಟನೆ ಹೇಗಾಯ್ತು ಎಂದು ನೋಡೋಣ ಬನ್ನಿ. 

ಅದು ಬಾಲಿವುಡ್ ನಲ್ಲಿ ಏಕೈಕ ಟಾಪ್ ನಟಿಯಾಗಿ ಡ್ರೀಮ್ ಗರ್ಲ್ ಆಗಿ ನಟಿ ಹೇಮಾಮಾಲಿನಿ ಮಿಂಚುತ್ತಿದ್ದ ಕಾಲ. ಈ ನಟಿಯ ಬಗ್ಗೆ ಅದೆಷ್ಟು ಟಾಪ್ ನಟರು ಕನಸು ಕಾಣುತ್ತಿದ್ದರು ಅಂತ ಗೊತ್ತಿಲ್ಲ. 

ಆಗಿನ್ನೂ ಗಿರೀಶ್ ಕಾರ್ನಾಡ್ ಅವರು ಪುಣೆ ಫಿಲಮ್ ಇನ್ಸ್ ಟ್ಯೂಟ್ ನಲ್ಲಿ ವಿದ್ಯಾರ್ಥಿಯಾಗಿದ್ದರು ಗಿರೀಶ್ ಕಾರ್ನಾಡ್ ಅವರನ್ನು ಹತ್ತಿರದಿಂದ ನೋಡಿದ್ದ ಹೇಮಮಾಲಿನಿ ಅವರ ತಾಯಿ ಜಯ ಗಿರೀಶ್ ಬಗ್ಗೆ ಒಳ್ಳೆ ಅಭಿಪ್ರಾಯ ಹೊಂದಿದ್ದರೂ. 

ಹೇಗಾದ್ರೂ ಮಾಡಿ ಮಗಳನ್ನು ಗಿರೀಶ್ ಗೆ ಕೊಟ್ಟು ಮದುವೆ ಮಾಡಬೇಕು ಎಂಬುದು ಅವರ ಆಸೆ ಆಗಿತ್ತು. ಜಯ ಅವರು ನಿರ್ಮಿಸುತ್ತದ್ದ ಸ್ವಾಮಿ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುವಂತೆ ಒತ್ತಾಯ ಮಾಡಿದರು. 

ಈ ಚಿತ್ರದಲ್ಲಿ ಕಾರ್ನಾಡ್ ಮತ್ತು ಹೇಮಮಾಲಿನಿ ಜೋಡಿಯಾಗಿ ನಟಿಸುತ್ತಿದ್ದು ಶೂಟಿಂಗ್ ವೇಳೆ ಹೇಮಮಾಲಿನಿ ನಾವಿಬ್ಬರೂ ಮದುವೆ ಆಗುತ್ತಿದ್ದೇವೆ ಎಂದು ಪತ್ರಿಕೆಗಳಲ್ಲಿ ಬರುತ್ತಿದೆ, ಹಾಗೆ ಎಲ್ಲರೂ ಭಾವಿಸುತ್ತಾರೆ ಇದರ ಬಗ್ಗೆ ನೀವೇನಂತೀರಾ ಎಂದು ಕೇಳಿದರು. 

ಇದಕ್ಕೆ ಉತ್ತರಿಸಿದ ಗಿರೀಶ್ ಅವರು ಪತ್ರಿಕೆಗಳಲ್ಲಿ ಬರುತ್ತಿದೆ ಎನ್ನುವುದು ಮುಖ್ಯವಲ್ಲ ಎಂದು ಹೇಳಿದರು. ನಾನು ಮದುವೆಯಾಗುವ ಹುಡುಗಿಯ ಹೆಸರು ಸರಸ್ವತಿ, ಅವಳು ಅಮೇರಿಕದಲ್ಲಿದ್ದಾಳೆ ಎಂದು ನೇರವಾಗಿ ಹೇಳಿಯೇ ಬಿಟ್ಟರು. ಹೇಮಾ ಮಾಲಿನಿಯ ಪ್ರೇಮ ನಿವೇದನೆಯನ್ನು ಒಂದೇ ಮಾತಿನಲ್ಲಿ ತಿರಸ್ಕರಿಸಿಬಿಟ್ಟರು ಕಾರ್ನಾಡ್ ಅವರು.

ಇಂಗ್ಲೆಂಡ್ ನಲ್ಲಿ ಒಂದು ಪಾರ್ಟಿಯಲ್ಲಿ ಸರಸ್ವತಿ ಅವರನ್ನ ಮೀಟ್ ಆಗಿದ್ದ ಗಿರೀಶ್ ಕಾರ್ನಾಡ್ ಅವರನ್ನು ಪ್ರೀತಿಸಿ ಹತ್ತು ವರ್ಷಗಳ ನಂತರ ಮದುವೆಯಾದರು. ಈಗ ಗಿರೀಶ್ ಕಾರ್ನಾಡ್ ಅವರು ನಮ್ಮ ಜೋತೆ ಇಲ್ಲ. ಆದ್ರೆ ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ. ಕನ್ನಡ ಭಾಷೆ ಇರುವವರೆಗೂ ಅವರ ಹೆಸರು ಅಜರಾಮರವಾಗಿರುತ್ತದೆ.

Leave a Reply

Your email address will not be published. Required fields are marked *